Ad Widget

ಸುಳ್ಯ 11ನೇ ವರ್ಷದ ಮೊಸರು ಕುಡಿಕೆ ಉತ್ಸವ, ವಿಶೇಷ ಆಕರ್ಷಣೆಯಾಗಿ ದೇವಾಲಯದ ಬಳಿಯಲ್ಲಿ ಅಟ್ಟಿ ಮಡಕೆ – ಎ ವಿ ತೀರ್ಥರಾಮ

ಸುಳ್ಯ: ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು ವಿಶ್ವಹಿಂದು ಪರಿಷತ್ ಸ್ಥಾಪನ ದಿನಾಚರಣೆಯ ಅಂಗವಾಗಿ ದಿನಾಂಕ 4-09-2024 ರಂದು ಸುಳ್ಯ ಮೊಸರು ಕುಡಿಕೆ ಉತ್ಸವ ನಡೆಯಲಿದೆ ಎಂದು ತಿಳಿಸಿದರು.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಸಲಹಲವಾರು ವರ್ಷಗಳಿಂದ ಅದ್ದೂರಿಯಾಗಿ ಸುಳ್ಯ ಮೊಸರು ಕುಡಿಕೆ ಉತ್ಸವವು ಸೆ.4 ರಂದು ನಡೆಯಲಿದ್ದು ಈ ಭಾರಿ ವಿಶೇಷವಾಗಿ ಖ್ಯಾತ ವಾಗ್ಮಿ ಮಾಜಿ ಸಂಸದರಾದ ಪ್ರತಾಪ್ ಸಿಂಹ ಅವರು ದಿಕ್ಸೂಚಿ ಭಾಷಣವನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಗಣಪತಿ ಭಟ್ ಮಜಿಕೋಡಿ , ಮುಖ್ಯ ಅಥಿತಿಗಳಾಗಿ ಕೇಪು ಅಜಿಲ , ಪ್ರದೀಪ್ ಸರಿಪಲ್ಲ ,ಪುನೀತ್ ಅತ್ತಾವರ , ಶಶಿಧರ ತೆಂಕಿಲ ಭಾಗವಹಿಸಲಿದ್ದು ಸುಳ್ಯದ ನಗರದುದ್ದಕ್ಕು 17 ಕಡೆಗಳಲ್ಲಿ ಹಿಂದು ಯುವಕರಿಂದ ಸಾಹಸಮಯವಾದ ಅಟ್ಟಿ ಮಡಿಕೆ ಒಡೆಯುವ ಸ್ಪರ್ದೆಗಳೊಂದಿಗೆ ಸಾಗಲಿದೆ ಎಂದು ತಿಳಿಸಿದರು.

ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ತೆಂಗಿನಕಾಯಿವೊಡೆಯುವ ಮೂಲಕ ಹರಪ್ರಸಾದ್ ತುದಿಯಡ್ಕ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು ಪತ್ರಿಕಾಗೋಷ್ಟಿಯಲ್ಲಿ ಸೋಮಶೇಖರ ಪೈಕಾ , ನವೀನ್ ಎಲಿಮಲೆ , ಹರಿಪ್ರಸಾದ್ ಎಲಿಮಲೆ , ಪ್ರಕಾಶ್ ಯಾದವ್ , ರವಿಚಂದ್ರ ಕೊಡಿಯಾಳಬೈಲು , ದೇವಿಪ್ರಸಾದ್ ಅತ್ಯಾಡಿ , ಸನತ್ ಚೊಕ್ಕಾಡಿ , ವರ್ಷಿತ್ ಚೊಕ್ಕಾಡಿ , ಮಂಜುನಾಥ್ ಕಾಟೂರು ,ರೂಪೇಶ್ ಪೂಜಾರಿಮನೆ ಮತ್ತಿತರರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!