ಮಳೆಯನ್ನು ಲೆಕ್ಕಿಸದೇ ರಸ್ತೆತಡೆ ನಡೆಸಿ ಘೋಷಣೆ ಕೂಗಿದ ಕಾರ್ಯಕರ್ತರು:
ಸುಳ್ಯ: ಬಿಜಪಿ ಯುವಮೋರ್ಚಾ ವತಿಯಿಂದ ಐವನ್ ಡಿಸೋಜರ ಹೇಳಿಕೆ ವಿರುದ್ದ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ವಿನಯ ಮುಳುಗಾಡು ಮಾತನಾಡುತ್ತಾ ಭಂಡ ಮುಖ್ಯಮಂತ್ರಿಗಳು ಜೈಲಿಗೆ ಹೋಗುವ ತನಕ ನಾವು ಪ್ರತಿಭಟನೆ ಮಾಡುತ್ತೆವೆ ಎಂದು ಹೇಳಿದರು. ರಾಜ್ಯಪಾಲರ ವಿರುದ್ದ ಮಾತನಾಡಿದ ಐವನ್ ಡಿಸೋಜರು ಬಾಂಗ್ಲದ ಮಾದರಿಯಲ್ಲಿ ನಿಮ್ಮನ್ನು ಓಡಿಸುತ್ತೆವೆ ಎಂಬುದು ಸರಿಯಲ್ಲ ಅಧಿಕಾರಿಗಳ ಸಮ್ಮುಖದಲ್ಲೆ ಈ ರೀತಿಯ ಹೇಳಿಕೆ ನೀಡಿದ್ದು ಇವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ವಿರೂಪಾಕ್ಷ ಮಾತನಾಡುತ್ತಾ ಜನರ ಕಿವಿಗೆ ದಾಸವಾಳ ಹೂ ಇಡುವ ಕೆಲಸ ಮಾಡುತ್ತಿದೆ. ಇದೊಂದು ಭಂಡ ಸರಕಾರವಾಗಿದೆ ಇದು ಜನರ ಕಿವಿಗೆ ಹೂ ಇಡುವ ಕೆಲಸವನ್ನೆ ಮಾಡುತ್ತಿದೆ ಎಂದು ಹೇಳಿದರು. ಬಳಿಕ ಕಾರ್ಯಕರ್ತರು ಮಳೆಯ ನಡುವೆಯು ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ದ ಪ್ರತಿಭಟನೆ ಕೂಗಿದರು. ಪ್ರತಿಭಟನಾ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ವೆಂಕಟ್ ವಳಲಂಬೆ, ಸುಬೋದ್ ಶೆಟ್ಟಿ ಮೇನಾಲ, ಉಪಾಧ್ಯಕ್ಷರಾದ ಆರ್.ಕೆ.ಭಟ್ ಕುರುಂಬಡೇಲು,ಶಿವಾನಂದ ಕುಕ್ಕುಂಬಳ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ, ಬಿಜೆಪಿ ನಗರಾಧ್ಯಕ್ಷ ಎ.ಟಿ.ಕುಸುಮಾಧರ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್, ಪ್ರಮುಖರಾದ ಮನುದೇವ ಪರಮಲೆ, ಆಶಾ ತಿಮ್ಮಪ್ಪ, ಗುಣವತಿ ಕೊಲ್ಲಂತ್ತಡ್ಕ, ತೇಜಸ್ವಿನಿ ಕಟ್ಟಪುಣಿ, ಶಶಿಕಲಾ ನೀರಬಿದಿರೆ, ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಬುದ್ಧ ನಾಯ್ಕ, ಸುಧಾಕರ ಕುರುಂಜಿಭಾಗ್, ದಾಮೋದರ ಮಂಚಿ, ಶಂಕರ ಪೆರಾಜೆ, ಶಿವನಾಥ್ ರಾವ್, ಹೇಮಂತ ಕಂದಡ್ಯ ನಾರಾಯಣ ಶಾಂತಿನಗರ, ರಾಧಾಕೃಷ್ಣ ರೈ ಬೂಡು, ಸರೋಜಿನಿ ಪೆಡ್ಕ, ರಾಜೇಶ್ ರೈ ಮೇನಾಲ, ಅಶೋಕ್ ಅಡ್ಕಾರ್, ದಿನೇಶ್ ದುಗಲಡ್ಕ, ಅಜಿತ್ ಐವರ್ನಾಡು, ರಾಜೇಶ್ ಕಿರಿಭಾಗ, ಜಗದೀಶ್ ಸರಳಿಕುಂಜ, ಸತೀಶ್ ನಾಯ್ಕ ಶಿವರಾಮ ಕೇರ್ಪಳ, ಜಗನ್ನಾಥ ಜಯನಗರ, ನಾರಾಯಣ ಶಾಂತಿನಗರ, ಶೀನಪ್ಪ ಬಯಂಬು, ಸುಶೀಲಾ ಜಿನ್ನಪ್ಪ, ಚಿದಾನಂದ ಕುದ್ದಾಜೆ, ಜಯರಾಜ ಕುಕ್ಕೇಟ್ಟಿ, ಕಿಶನ್ ಜಬಳೆ, ಲತೀಶ್ ಗುಂಡ್ಯ ಅವಿನಾಶ್ ಕುರುಂಜಿ, ನವೀನ್ ಎಲಿಮಲೆ, ಸುದರ್ಶನ ಪಾತಿಕಲ್ಲು, ಕಿರಣ್ ಕುರುಂಜಿ, ನಾರಾಯಣ ಶಾಂತಿನಗರ, ಅನೂಪ್ ಬಿಳಿಮಲೆ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.