ಸುಳ್ಯ: ಕಳೆದ 44 ವರ್ಷಗಳಿಂದ ಸುಳ್ಯದ ಜನತೆಗೆ ನಿರಂತರ ಜನರಲ್ ಇನ್ಸೂರೆನ್ಸ್ ಸೇವೆಗಳನ್ನು ಒದಗಿಸುತ್ತಿರುವ ಶ್ರೀ ಸುಧಾಕರ ಕೊಚ್ಚಿ (ನಿವೃತ್ತ ಎ.ಒ. (ಡಿ.), ಎನ್.ಐ.ಸಿ.ಎಲ್.) ಅವರು ತಮ್ಮ “ನೇಷನಲ್ ಇನ್ಸೂರೆನ್ಸ್ ಪೋರ್ಟಲ್ ಕಛೇರಿಯನ್ನು” ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಸಮೀಪದ ಡಿ.ಎಂ. ಕಾಂಪ್ಲೆಕ್ಸ್‍ಗೆ ಸ್ಥಳಾಂತರಿಸಿದ್ದಾರೆ. ಸುಳ್ಯದ ಪ್ರಥಮ ನೇಷನಲ್ ಮೆಡಿ – ಕ್ಲೈಮ್ ಪಾಲಿಸಿಯ ಗ್ರಾಹಕರು (1989), ಭಾರತ್ ಆಗ್ರೊ ಸುಳ್ಯ ಇದರ ಮಾಲಿಕರಾಗಿರುವ, ಶ್ರೀ ರೊ| ರಾಮಚಂದ್ರ ಪೆರಿಯಡ್ಕ ಅವರು ದೀಪ ಬೆಳಗಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಸಮರ್ಥ ನಿಧಿ ಲಿಮಿಟೆಡ್ ನ ವಿಭಾಗೀಯ ಅಧಿಕಾರಿ, ಶ್ರೀ ಹರಿಪ್ರಸಾದ್ ಎನ್.ಆರ್. ಹಾಗೂ ನ್ಯಾಯವಾದಿ ರಾಮಕೃಷ್ಣ ಎ. ಸುಳ್ಯ ಭಾಗವಹಿಸಿದರು. ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ನೂತನ ಪೋರ್ಟಲ್ ಕಛೇರಿಯು ಕೊಚ್ಚಿಯವರ ಪರಿಚಿತ ಸ್ಪರ್ಶದೊಂದಿಗೆ ಗ್ರಾಹಕರಿಗೆ ಪಾಲಿಸಿಗಳ ಸುಲಭ ನಿರ್ವಹಣೆಯಲ್ಲಿ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಉದ್ದೇಶವು ಸುಳ್ಯ ಪರಿಸರದ ಜನತೆಗೆ ಸದಾ ನಂಬಿಕೆಗೆ ತಕ್ಕ ವಿಶ್ವಾಸಾರ್ಹ ವಿಮಾ ಸೇವೆಗಳನ್ನು ಒದಗಿಸುವುದು. ಈ ಪೋರ್ಟಲ್ ಕಛೇರಿ ನಮ್ಮ ಸೇವೆಗಳನ್ನು ಅನುಕೂಲಕರವಾಗಿ ಒದಗಿಸುವ ದಿಶೆಯಲ್ಲಿ ದಿಟ್ಟ ಹೆಜ್ಜೆಯಾಗಿದೆ,” ಎಂದು ಹೇಳಿದರು. ಸುಳ್ಯದಲ್ಲಿ ಕೇವಲ ಈ ಕಛೇರಿ ಸುಧಾಕರ ಕೊಚ್ಚಿ ಅವರ ಅಧಿಕೃತ ನೇಷನಲ್ ಇನ್ಸೂರೆನ್ಸ್ ಪೋರ್ಟಲ್ ಕಛೇರಿ ಆಗಿದ್ದು, ಯಾವುದೇ ಶಾಖೆ, ಹಳೆ ಸ್ಥಳ ಅಥವಾ ಇತರೆ ಖಾಸಗಿ ವ್ಯವಹಾರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
- Thursday
- November 21st, 2024