ಸುಬ್ರಹ್ಮಣ್ಯ: ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಇದರ ಇಪ್ಪತ್ತನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಮತ್ತು ಸಾಂಪ್ರದಾಯಿಕ ಅಟ್ಟಿ ಮಡಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭವು ಉತ್ಸವ ಸಮಿತಿಯ ಅಧ್ಯಕ್ಷರಾದ ದೀಪಕ್ ಎಚ್ ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಕಾಲೇಜಿನ ಡಾ.ವಿನ್ಯಾಸ್ ಹೊಸೊಳಿಕೆ ಧಾರ್ಮಿಕ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆಗಳಿಗೆ ಸುಬ್ರಹ್ಮಣ್ಯ ಆರಕ್ಷಕ ಠಾಣಾ ಉಪನಿರೀಕ್ಷಕ ಕಾರ್ತಿಕ್. ಕೆ ಬಹುಮಾನವನ್ನು ವಿತರಿಸಿದರು. ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಏನ್.ಎಸ್. ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ನಾಯರ್, ಜೆಸಿ ಇಂಟರ್ನ್ಯಾಷನಲ್ ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಅಧ್ಯಕ್ಷ ಡಾ.ರವಿ ಕಕ್ಕೆ ಪದವು, ಕುಕ್ಕೆಶ್ರೀ ಆಟೋ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷ ಮಹೇಶ್ ಗುಡ್ಡೆಮನೆ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ನಡುತೋಟ ಮುಖ್ಯ ಅತಿಥಿಗಳಾಗಿ ಉಪಸ್ಥರಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟಕ್ಕೆ 6ನೇ ರ‍್ಯಾಂಕ್ ಪಡೆದ ವರ್ಷ ಬೇಕಲ್, ಪಿಯುಸಿ ವಿಭಾಗದಲ್ಲಿ 5ನೇ ರ‍್ಯಾಂಕ್ ಪಡೆದ ದುರ್ಗ ಲಕ್ಷ್ಮಿ, ಬಿ ಬಿ ಎ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 6ನೇ ರ‍್ಯಾಂಕ್ ಪಡೆದ ಸಿಂಧೂರ, ಬಿಕಾಂ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 1೦ನೇ ರ‍್ಯಾಂಕ್ ಪಡೆದ ಶ್ರಾವ್ಯ ಮುತ್ಲಾಜೆ, ವಾಣಿಜ್ಯ ವಿಭಾಗದಲ್ಲಿ 8ನೇ ರ‍್ಯಾಂಕ್ ಪಡೆದ ದಿಶಾ ಎಸ್ ಹಾಗೂ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿ ಪುರಸ್ಕೃತರಾದ ಸುಂದರ ಕೆಜಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿವೃತ್ತ ನೌಕರ ಈಶ್ವರ ಗೌಡ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಟೀಮ್ ಕುಕ್ಕೆ ಮೆಟ್ಸ್ ಲೋಗೊ ಬಿಡುಗಡೆಗೊಳಿಸಲಾಯಿತು.
ಅಟ್ಟಿ ಮಡಿಕೆ ಉತ್ಸವ ಸಂಜೆ ಸವಾರಿ ಮಂಟಪದ ಬಳಿಯ ಬೈಪಾಸ್ ರಸ್ತೆಯಲ್ಲಿ ನೆರವೇರಿತು. ಅಟ್ಟಿ ಮಡಿಕೆ ಉತ್ಸವಕ್ಕೆ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ದಿವಾನರಾದ ಸುದರ್ಶನ್ ಜೋಯಿಸ್ ತೆಂಗಿನ ಕಾಯಿ ಹಾಗೂ ಮಡಿಕೆ ಒಡೆಯುವ ಮೂಲಕ ಚಾಲನೆಯನ್ನು ನೀಡಿದರು. ಜಾರುವ ಕಂಬ ಏರುವ ಸ್ಪರ್ಧೆಯಲ್ಲಿ 11 ಜನ, ಅಟ್ಟಿ ಮಡಿಕೆ ಉತ್ಸವದಲ್ಲಿ 11 ತಂಡಗಳು ಪಾಲ್ಗೊಂಡಿದ್ದವು. ಲಕ್ಷ್ಮಿ ಜನಾರ್ಧನ ಯುವಕ ಮಂಡಲ ಕೇಪು ಪ್ರಥಮ, ಸಿದ್ಧಿವಿನಾಯಕ ದೊಡ್ಡ ಕೊಪ್ಪ ಕಡಬ ದ್ವಿತೀಯ, ಶಾಸ್ತ್ರವು ಯುವಕ ಮಂಡಳ ರೆಂಜಾಳ ತೃತೀಯ, ಫ್ರೆಂಡ್ಸ್ ಹರಿಹರ ಚತುರ್ಥ ಸ್ಥಾನ ಪಡೆಯಿತು. ಸ್ಥಾಪಕಾಧ್ಯಕ್ಷ ಉಮೇಶ್ ಕೆ ಏನ್ ಸ್ವಾಗತಿಸಿದರು. ಸಂಚಾಲಕ ಲೋಕೇಶ್ ಬಿ.ಎನ್ ವಂದಿಸಿದರು. ರಾಜೇಶ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ದೀಪಕ್ ನಂಬಿಯಾರ್, ಭಾರತಿ ದಿನೇಶ್, ಭಾರತ್ ನೆಕ್ರಾಜೆ, ಡಾ.ಸಿದ್ದಲಿಂಗ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಸುಕೇಶ್, ಕೋಶಾಧಿಕಾರಿ ಉದಯಕುಮಾರ್ ನೂಚಿಲ ಹಾಗೂ ಪೂರ್ವ ಅಧ್ಯಕ್ಷರು, ಸಮಿತಿ ಸದಸ್ಯರು ಇದ್ದರು.