ತಾಲೂಕು ಪಂಚಾಯತ್ ಬಳಿಯಿಂದ ಬಸ್ಸು ನಿಲ್ದಾಣದವರೆಗೆ ಪಾದಯಾತ್ರೆ , ಪಾದಯಾತ್ರೆಯಲ್ಲಿ ರಾಜ್ಯ , ಜಿಲ್ಲೆ ನಾಯಕರು ಭಾಗಿ
ಸುಳ್ಯ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಸುಳ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಸುಳ್ಯ ತಾಲೂಕು ಪಂಚಾಯತ್ ಬಳಿಯಿಂದ ಜಾಥ ಆರಂಭಗೊಂಡು ನಗರದಲ್ಲಿ ಸಾಗಿ ಬಂದು ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪ್ರತಿಭಟಣೆಯನ್ನು ಉದ್ದೇಶಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡುತ್ತಾ ಕಾಂಗ್ರೆಸ್ ನಾಯಕರ ಮನೆ ಮೇಲೆ ಇಡಿ ಐಟಿ ದಾಳಿ ನಡೆಸಿ ಬಳಿಕ ಬಿಜೆಪಿ ಸೇರಿದಾಗ ಅವರ ವಿರುದ್ದದ ಪ್ರಕರಣ ಹಿಂಪಡೆಯುತ್ತದೆ ಹಾಗೆಯೇ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ವಿಫಲವಾದ ಹಿನ್ನಲೆಯಲ್ಲಿ ಹಿಂಬಾಗಿಲಿನ ಮೂಲಕ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ರಾಜ್ಯಪಾಲರನ್ನು ಬಳಸಿಕೊಳ್ಳುತ್ತೊದೆ ಎಂದು ರಾಜ್ಯಪಾಲರ ವಿರುದ್ದ ಕಿಡಿಕಾರಿದರು. ವಿಧಾನ ಪರಿಷತ್ ಸದಸ್ಯ ಕೆಪಿಸಿಸಿ ಕಾರ್ಯಧ್ಯಲ್ಷರಾದ ಮಂಜುನಾಥ ಭಂಡಾರಿ ಮತನಾಡುತ್ತಾ ಮೂಡ ಎಂಬುವುದನ್ನು ಬಿಜೆಪಿ ಸುಖಾಸುಮ್ಮನೆ ಗುಲ್ಲೆಬಿಸಿದೆ . ಕಾಂಗ್ರೆಸ್ ಪ್ರಣಾಳಿಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದಾಗ ಇಂತಹ ಆರೋಪಗಳನ್ನು ಮಾಡುತ್ತಿದ್ದು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದರು ಅದನ್ನು ಜಾರಿಗೊಳಿಸಿದಾಗ ಅಪಹಾಸ್ಯ ಮಾಡಿದ್ದರು ಇದೀಗ ಅವೆಲ್ಲವನ್ನು ನೇರವಾಗಿ ಜನರಿಗೆ ತಲುಪಿಸುವಾಗ ಇಂಥಹ ಒಂದು ಕಟ್ಟು ಕಥೆಗಳ ಮೂಲಕ ಬಿಜೆಪಿ ಬಂದಿದೆ ಎಂದು ಹೇಳಿದರು. ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಪದ್ಮರಾಜ್ ಪೂಜಾರಿ ಮಾತನಾಡುತ್ತಾ ರೆಡ್ಡಿ , ಹೆಚ್ಡಿಕೆ ,ಶಶಿಕಲಾ ಜೊಲ್ಲೆ , ಮುರುಗೇಶ್ ನಿರಾಣಿ ಸೇರಿದಂತೆ ಇತರರ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದಾಗ ಅದನ್ನು ನೀಡದೇ ಕೇವಲ ಅಬ್ರಹಾಂ ರವರು ನೀಡಿದ ಒಂದೇ ಒಂದು ದೂರಿಗೆ ಬೆಳಗ್ಗೆಯಿಂದ ಸಂಜೆಯಾಗುವ ಒಳಗೆ ಅನುಮತಿ ನೀಡಿರುವುದು ಸರಿಯಲ್ಲ . ಅಲ್ಲದೇ ಅದು ಅವರ ಜಮೀನಾಗಿದ್ದು ಅದನ್ನು ಮೂಡ ವಶಪಡಿಸಿಕೊಂಡಾಗ ಪತ್ರ ಬರೆದು ನಷ್ಟ ಪರಿಹಾರ ಪಡೆದುಕೊಳ್ಳುವುದು ಸಹಜವಾಗಿದೆ ಅದನ್ನು ಮಾಡಿದ್ದಾರೆ ಅಲ್ಲದೇ 50-50 ಅನುಪಾತದಲ್ಲಿ ಭೂಮಿಯನ್ನು ಪಡೆದುಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು. ಅಬ್ರಹಾಂ ರವರಿಗೆ ನ್ಯಾಯಾಲಯವೇ ದಂಡ ವಿಧಿಸಿತ್ತು ಅಂತವರು ನೀಡಿದ ಅರ್ಜಿಗೆ ಅನುಮತಿ ನೀಡಿರುವುದು ಸರಿಯಲ್ಲ ರಾಜ್ಯಪಾಲರು ಬಿಜೆಪಿಯವರ ಅಣತಿಯಂತೆ ನಡೆಯುತ್ತಿದ್ದು ಅವರು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನ ಸಭೆಯಲ್ಲಿಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆ ಪಿ ಸಿ ಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿದರು .ಪ್ರತಿಭಟನಾ ಸಭೆಯಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಂ.ಶಹೀದ್ ತೆಕ್ಕಿಲ್, ಎಂ.ಎಸ್.ಮಹಮ್ಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಗಸ್ವಾಗತಿಸಿದ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ , ಕಾಂಗ್ರೆಸ್ ಮುಖಂಡರಾದ ನಿತ್ಯಾನಂದ ಮುಂಡೋಡಿ, ರಾಜೀವಿ ರೈ, ಎನ್.ಜಯಪ್ರಕಾಶ್ ರೈ, ಪ್ರದೀಪ್ ಕುಮಾರ್ ರೈ ಪಾಂಬಾರು, ಸರಸ್ವತಿ ಕಾಮತ್,ಎಂ.ವೆಂಕಪ್ಪ ಗೌಡ, ರಾಧಾಕೃಷ್ಣ ಬೊಳ್ಳೂರು, ಡಾ.ರಘು, ಗೀತಾ ಕೋಲ್ಚಾರ್, ಬೆಟ್ಟ ರಾಜಾರಾಮ ಭಟ್, ಪಿ.ಎಸ್.ಗಂಗಾಧರ, ಇಲ್ಬಾಲ್ ಎಲಿಮಲೆ, ಸುಧೀರ್ ಕುಮಾರ್ ಶೆಟ್ಟಿ, ಇಸ್ಮಾಯಿಲ್ ಪಡ್ಪಿನಂಗಡಿ, ಶರೀಪ್ ಕಂಠಿ, ಶಾಫಿ ಕುತ್ತಮೊಟ್ಟೆ, ಸುರೇಶ್ ಎಂ.ಎಚ್, ಲಕ್ಷ್ಮೀಶ ಗಬ್ಬಲಡ್ಕ, ಕೆ.ಎಸ್.ಉಮ್ಮರ್, ರಂಜಿತ್ ರೈ ಮೇನಾಲ, ಜಿ.ಕೆ.ಹಮೀದ್, ಮಹಮ್ಮದ್ ಕುಂಞಿ ಗೂನಡ್ಕ, ಕೆ.ಪಿ.ಜಾನಿ, ರಾಜು ಪಂಡಿತ್, ಅಶೋಕ್ ಚೂಂತಾರು, ಧರ್ಮಪಾಲ ಕೊಯಿಂಗಾಜೆ, ಮೂಸಾ ಕುಂಞಿ ಪೈಂಬೆಚ್ಚಾಲ್, ರಹೀಂ ಬೀಜದಕಟ್ಟೆ, ಶೌವಾದ್ ಗೂನಡ್ಕ, ವಿಜೇಶ್ ಹಿರಿಯಡ್ಕ, ಕಳಂಜ ವಿಶ್ವನಾಥ ರೈ, ಪ್ರವೀಣ ಮರುವಂಜ, ಸೋಮಶೇಖರ ಕೇವಳ, ಧೀರಾ ಕ್ರಾಸ್ತಾ, ಅಬ್ದುಲ್ ಗಫೂರ್ ಕಲ್ಮಡ್ಕ, ಹರೀಶ್ ಇಂಜಾಡಿ, ಹಸೈನಾರ್ ಹಾಜಿ ಗೋರಡ್ಕ,ಮಿತ್ರದೇವ ಮಡಪ್ಪಾಡಿ, ಶಹೀದ್ ಪಾರೆ,ಭವಾನಿ ಶಂಕರ ಕಲ್ಮಡ್ಕ ಎ.ಬಿ.ಇಬ್ರಾಹಿಂ ಕಲ್ಲುಗುಂಡಿ, ಅನಿಲ್ ರೈ, ಸಲೀಂ ಪೆರುಂಗೋಡಿ,ಅಬ್ದುಲ್ ಮಜೀದ್ ನಡುವಡ್ಕ , ಅಬ್ಬಾಸ್ ಅಡ್ಕಾ , ಚೇತನ್ ಕಜೆಗದ್ದೆ , ಗಂಗಾಧರ ಮೇನಾಲ ಮತ್ತಿತರರು ಉಪಸ್ಥಿತರಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ ಸ್ವಾಗತಿಸಿ ವಂದಿಸಿದರು.