Ad Widget

ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ,ಯುವ ನಿಧಿ ಪ್ರಗತಿಯ ಕುರಿತು ಅಸಮಾಧಾನ ಹೊರಹಾಕಿದ -ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ

ಸುಳ್ಯ: ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಮಟ್ಟದ ಮೊದಲ ಸಭೆಯು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.28ರಂದು ನಡೆಯಿತು. ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹುಲ್‌ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಜಿಲ್ಲಾ ಉಪಾಧ್ಯಕ್ಷ ಜಾಕಿಂ ಡಿಸೋಜ, ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂಚ ಗ್ಯಾರಂಟಿಗಳ ಪ್ರಗತಿ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳು ಯಾರೂ ಕೂಡ ಗ್ಯಾರಂಟಿ ಯೋಜನೆಯ ಸೌಲಭ್ಯ ಸಿಗದೆ ವಂಚಿತರಾಗಬಾರದು. ಅರ್ಹರಿಗೆ ಎಲ್ಲರಿಗೂ ಯೋಜನೆಯು ಸಿಗುವಂತೆ ಆಗಬೇಕು. ಯೋಜನೆಯ ಪರಿಣಾಮಕಾರಿ ಅನುಷ್ಠಾನ ಸಮಿತಿಯ ಉದ್ದೇಶ ಎಂದು ಜಿಲ್ಲಾ ಅಧ್ಯಕ್ಷ ಭರತ್‌ ಮುಂಡೋಡಿ ಹೇಳಿದರು. ಸರಕಾರದ ಯೋಜನೆಗಳು ಜನರಿಗೆ ಸಮರ್ಪಕವಾಗಿ ಮುಟ್ಟಬೇಕು ಎಂದು ಅವರು ಸಲಹೆ ನೀಡಿದರು. ಪಂಚ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ, ಶಕ್ತಿ, ಅನ್ನಭಾಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಮಟ್ಟದ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಮಾಹಿತಿ ನೀಡಿದರು. ರೇಷನ್ ಕಾರ್ಡ್ ಅಪ್‌ಡೇಟ್ ಆಗದ ಕಾರಣ ಕೆಲವು ಕಡೆ ಸಮಸ್ಯೆ ಆಗಿದೆ. ಹಳೆಯ ಕಾರ್ಡ್ ಅಪ್‌ಡೇಷನ್‌ ಆಗದೆ ಇರುವುದು, ಪಡಿತರ ತಿದ್ದುಪಡಿ ಬಾಕಿ ಆಗಿರುವುದು ಸಮಸ್ಯೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಅವಕಾಶ ವಂಚಿತರಾಗಿರುವುದು ಕಂಡು ಬಂದಿದೆ. ಅಂತಹಾ ತಾಂತ್ರಿಕ ಸಮಸ್ಯೆ ಬಗ್ಗೆ ಗ್ರಾಮವಾರು ಪಟ್ಟಿ ಕೊಡಿ.ಏನೇನು ತಾಂತ್ರಿಕ ಸಮಸ್ಯೆ ಎಂದು ವಿವರವಾದ ಪಟ್ಟಿ ಮಾಡಿ ತಾಲೂಕಿಗೆ ನೀಡಿ ಅದನ್ನು ಅವರು ಜಿಲ್ಲೆಗೆ ನೀಡುತ್ತಾರೆ ಅದನ್ನು ನಾವು ರಾಜ್ಯಕ್ಕೆ ಕಳುಹಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಅವರು ಹೇಳಿದರು. ಯೋಜನೆಯ ಕುರಿತು ಎಲ್ಲಾ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕೆಲಸ ಸದಸ್ಯರು ಪರಿಣಾಮಕಾರಿಯಾಗಿ ಮಾಡಬೇಕು. ಮಾಹಿತಿ ಕೊರತೆಯಿಂದ ಹಿಂದೆ ಬಿದ್ದಿರುವ ಜನರಿಗೆ ಮಾಹಿತಿ ನೀಡಿ ಅಗತ್ಯ ನೆರವು ಒದಗಿಸಬೇಕು ಎಂದು ಭರತ್‌ ಮುಂಡೋಡಿ ಸದಸ್ಯರಿಗೆ ಸೂಚಿಸಿದರು. ಬಿಪಿಎಲ್‌ ಕಾರ್ಡ್‌ದಾರರನ್ನು ಆದಾಯ ತೆರಿಗೆ ಪಾವತಿದಾರರು ಎಂದು ದಾಖಲಾಗಿರುವ ಕಾರಣ ಸಮಸ್ಯೆ ಉಂಟಾಗಿದೆ. ಇದರಿಂದ ಫಲಾನುಭವಿಗಳು ಅವಕಾಶ ವಂಚಿತರಾಗಿದ್ದಾರೆ. ಒಂದು ಸಾವಿರ ರೂ ದಂಡ ಕಟ್ಟಿ ಪಾನ್ -ಆಧಾರ್ ಲಿಂಕ್ ಮಾಡಿದವರದ್ದು ಈ ರೀತಿ ಬಂದಿದೆ ಎಂದು ಅಧಿಕಾರಿಗಳು ಹಾಗೂ ಸದಸ್ಯರು ಮಾಹಿತಿ ನೀಡಿದರು. ಈ ಕುರಿತು ವಿವರ ಕೊಡಿ ಸರಕಾರದ ಗಮನಕ್ಕೆ ತಂದು ಈ ತಾಂತ್ರಿಕ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಜಿಲ್ಲಾ ಅಧ್ಯಕ್ಷ ಭರತ್‌ ಮುಂಡೋಡಿ ಹೇಳಿದರು.ಯಾವ ಕಾರಣಕ್ಕೆ ಫಲಾನುಭವಿಗಳು ಯಾವ ಕಾರಣಕ್ಕೆ ವಂಚಿತರಾಗಿದ್ದಾರೆ ಎಂಬುದರ ಕುರಿತು ಮಾಹಿತಿ ಫಲಾನುಭವಿಗಳಿಗೆ ನೀಡಬೇಕು ಎಂದು ಅವರು ಹೇಳಿದರು.ಯುವನಿಧಿ ಯೋಜನೆಯಲ್ಲಿ ದಾಖಲಾತಿಗೆ ಬಾಕಿ ಇರುವ ಮತ್ತು ವೆರಿಫಿಕೇಷನ್‌ಗೆ ಬಾಕಿ ಇರುವ ಬಗ್ಗೆ ಪಟ್ಟಿ ನೀಡಬೇಕು ಅಲ್ಲದೇ ಯುವ ನಿಧಿ ದಾಖಲಾತಿಯ ಪ್ರಗತಿ ತೃಪ್ತಿದಾಯಕವಾಗಿಲ್ಲ. ಯುವನಿಧಿಗೆ ಹೆಚ್ಚು ದಾಖಲಾತಿ ಮತ್ತು ವೆರಿಫಿಕೇಶನ್ ಮಾಡಬೇಕು ಎಂದು ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು. ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿಯಿ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!