ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹರ್ಲಡ್ಕ ನಿವಾಸಿ ವೆಂಕಪ್ಪ ನಾಯ್ಕ್ ಎಂಬವರ ಪುತ್ರ ರುಕ್ಮಯ್ಯ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ೪೫ ವರ್ಷ ವಯಸ್ಸಾಗಿತ್ತು.
ಮೃತರು ತಂದೆ, ತಾಯಿ, ಹಾಗೂ ಪತ್ನಿ ರಮ್ಯ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.