Ad Widget

ನಾಗೇಶ್ ಕೆ.ಎಸ್. ಕುಕ್ಕುಡೇಲು ಅವರಿಗೆ ಮೇಲ್ವಿಚಾರಕರಾಗಿ ಭಡ್ತಿಗೊಂಡು ಆರಂತೋಡು ಮೆಸ್ಕಾಂ ಶಾಖೆಗೆ ವರ್ಗಾವಣೆ




ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಈಶ್ವರಮಂಗಲ ಶಾಖೆಯಲ್ಲಿ ಮೆಕ್ಯಾನಿಕ್ ಗ್ರೇಡ್ ॥ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗೇಶ್ ಕೆ.ಎಸ್.ರವರು ಕಛೇರಿ ಮೇಲ್ವಿಚಾರಕರಾಗಿ ಭಡ್ತಿಗೊಂಡು ಸುಳ್ಯ ಉಪ ವಿಭಾಗದ ಆರಂತೋಡು ಶಾಖೆಗೆ ವರ್ಗಾವಣೆಗೊಂಡಿದ್ದಾರೆ.

ಇವರು ಪುತ್ತೂರು, ಕುಂಬ್ರ ಶಾಖೆಯಲ್ಲಿ ಸಹಾಯಕ ಪವರ್ ಮ್ಯಾನ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. 2007 ಸೆಪ್ಟೆಂಬರ್ 12ರಂದು ಪುತ್ತೂರು ಶಾಖೆಗೆ ಸಹಾಯಕ ಲೈನ್‌ಮ್ಯಾನ್ ಆಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು ನಂತರ 2008-2009 ರ ತನಕ ಕುಂಬ್ರ ಶಾಖೆಯಲ್ಲಿ ಸಹಾಯಕ ಲೈನ್‌ಮ್ಯಾನ್ ಆಗಿ, 2009 ರಿಂದ 2024 ರ ತನಕ ಈಶ್ವರಮಂಗಲ ಶಾಖೆಯಲ್ಲಿ ಪವರ್‌ಮಾನ್, ಕಚೇರಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ತನ್ನ ಅತ್ಯುತ್ತಮ ಸೇವೆಯಿಂದಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಇವರು ಇತ್ತೀಚೆಗೆ ವರಮಹಾಲಕ್ಷ್ಮಿ ಸಮಿತಿ ಈಶ್ವರಮಂಗಲ ಮತ್ತು ಸುನ್ನಿ ಸೆಂಟರ್ ಈಶ್ವರಮಂಗಲದ ವತಿಯಿಂದ ಸನ್ಮಾನಗಳನ್ನು ಪಡೆದುಕೊಂಡಿದ್ದರು.

ಇವರು ಮಂಡೆಕೋಲು ಗ್ರಾಮದ ಕುಕ್ಕುಡೇಲು ಶೇಷಪ್ಪ ಗೌಡರವರ ಪುತ್ರ. ಇವರು ಪತ್ನಿ ಮಮತಾ, ಪುತ್ರಿ ವಿಯಾಂಶಿರವರೊಂದಿಗೆ ಪ್ರಸ್ತುತ ಪುತ್ತೂರಿನ ಪರ್ಪುಂಜದಲ್ಲಿ ವಾಸ್ತವ್ಯ ಹೊಂದಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading