(ವರದಿ : ಉಲ್ಲಾಸ್ ಕಜ್ಜೋಡಿ)
ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ತೆಂಗು ಕೃಷಿಯೊಂದಿಗೆ ಕಾಳುಮೆಣಸು ಬೆಳೆಯಲಾಗುತ್ತಿದ್ದು, ಕರಾವಳಿ ಭಾಗದ ಬಹುಮುಖ್ಯ ಬೆಳೆಗಳಲ್ಲಿ ಕಾಳುಮೆಣಸು ಕೂಡ ಒಂದಾಗಿದೆ.
ಕಾಳುಮೆಣಸು ಬಳ್ಳಿಯಲ್ಲಿ ಹೂವು ಬೆಳೆದ ವಿಸ್ಮಯಕಾರಿ ಘಟನೆಯೊಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಎಂಬಲ್ಲಿ ನಡೆದಿದ್ದು, ಕೃಷಿಕರಾದ ಕಿಶೋರ್ ಕುಮಾರ್ ಕಜ್ಜೋಡಿ ಎಂಬುವವರು ತಮ್ಮ ತೋಟದಲ್ಲಿ ನೆಡುವ ಸಲುವಾಗಿ ಕಾಳುಮೆಣಸು ಬಳ್ಳಿಗಳನ್ನು ಪಾಲಿಥೀನ್ ಚೀಲಗಳಲ್ಲಿ ತುಂಬಿಸಿಟ್ಟಿದ್ದು, ಹಾಗೆ ತುಂಬಿಸಿಟ್ಟಿದ್ದ ಒಂದು ಗಿಡದಲ್ಲಿ ಇದೀಗ ಹೂವು ಬಿಟ್ಟಿದ್ದು ವಿಸ್ಮಯಕ್ಕೆ ಕಾರಣವಾಗಿದೆ.