ದೇವ ಗೆಳೆಯರ ಬಳಗ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲಗಳ ಜಂಟಿ ಆಶ್ರಯದಲ್ಲಿ ಆ.26 ರಂದು ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ 34ನೇ ವರ್ಷದ ಮೊಸರು ಕುಡಿಕೆ ಮತ್ತು ಜಾರು ಕಂಬ,ಕೃಷ್ಣ ವೇಷ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಚಿನ್ನಪ್ಪ ಗೌಡ ದೇವ ನೆರವೇರಿಸಿದರು. ಸಂಪಾಜೆ ಹೊರಠಾಣೆಯ ಸಹಾಯಕ ಉಪನಿರೀಕ್ಷಕರಾದ ಸುಂದರ ಸುವರ್ಣ ಧಾರ್ಮಿಕ ಉಪನ್ಯಾಸ ನೀಡಿದರು.
ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆದ ಬಳಿಕ ಸಮಾರೋಪ ಹಾಗೂ ಸನ್ಮಾನ ಸಮಾರಂಭ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಹಿರಿಯಡ್ಕ ವಹಿಸಿದ್ದರು. ಈ ಸಂದರ್ಭದಲ್ಲಿ
ದೇವ ಕಿ.ಪ್ರಾ.ಶಾಲೆಯಲ್ಲಿ 17 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜಯಪ್ರಕಾಶ್ ಮುತ್ಲಾಜೆ ಹಾಗೂ ಮೆಸ್ಕಾಂ ಗುತ್ತಿಗಾರು ಶಾಖೆಯ ಸಿಬ್ಬಂದಿ ಸುಧಾಕರ ಪಂಜಿಪಳ್ಳ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷೆ ಲೀಲಾವತಿ ಸೇವಾಜೆ, ಗುತ್ತಿಗಾರು ಗ್ರಾ.ಪಂ.ಸದಸ್ಯ ವಿಜಯಕುಮಾರ್ ಚಾರ್ಮತ, ನಿವೃತ್ತ ಶಿಕ್ಷಕ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ ನಿಲಯ” ಕಂದ್ರಪ್ಪಾಡಿ, ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ, ಪತ್ರಕರ್ತ ಮುರಳೀಧರ ಅಡ್ಡನಪಾರೆ, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ ಕೆ. ಉಪಸ್ಥಿತರಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಲೋಚನಾ ದೇವ, ಗ್ರಾ.ಪಂ.ಸದಸ್ಯ ಹಾಗೂ ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ರಮೇಶ್ ಪಡ್ಪು, ಗೆಳೆಯರ ಬಳಗದ ಕಾರ್ಯದರ್ಶಿ ಜಯಂತ್ ದೇವ, ಜ್ಯೋತಿಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾ ಪದ್ಮನಾಭ ದೇವ ಉಪಸ್ಥಿತರಿದ್ದರು.
ಯೋಗೀಶ್ ದೇವ ಸ್ವಾಗತಿಸಿ, ಉಮೇಶ್ ದೇವ ವಂದಿಸಿದರು. ಕಾರ್ತಿಕ್ ದೇವ ಕಾರ್ಯಕ್ರಮ ನಿರೂಪಿಸಿದರು.