



ನೋಬೆಲ್ ಎಜುಕೇಶನ್ ಸೆಂಟರ್ ಈರೋಡ್ ತಮಿಳುನಾಡು ಇವರು ಆಯೋಜಿಸಿದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಐವರು ವಿದ್ಯಾರ್ಥಿಗಳಿಗೆ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳಾದ ಶ್ರೇಯಸ್, ನೇಸರ, ಸಾನಿಧ್ಯ, ಹೃದನ್, ನಿನಾದ್, ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 45 ವಿದ್ಯಾರ್ಥಿಗಳು ಭಾಗವಹಿಸಿದ್ದು, ಜೊತೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಸ್ಕೂಲ್ ಉಜಿರೆ ಯಲ್ಲಿ ನಡೆದ ಐಕ್ಸ್ ಸ್ಪರ್ಧೆಯಲ್ಲಿ ಕ್ರಾಫ್ಟ್ ರಚನೆಯಲ್ಲಿ ತನಿಷಾ ಮತ್ತು ಸಾನಿಧ್ಯ ಬಿ.ಎಮ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಪ್ರೋತ್ಸಾಹವನ್ನು ನೀಡಿದ್ದಾರೆ. ಅಮರ ಸುದ್ದಿ ನ್ಯೂಸ್ ಗೆ ಚಿತ್ರಕಲಾ ಶಿಕ್ಷಕ ವಿನೋದ್ ಕುಮಾರ್ ಕೊಕ್ಕಡ ತಿಳಿಸಿದ್ದಾರೆ.
