ಕಲಾಮಾಯೆ(ರಿ) ಏನೆಕಲ್ ಇದರ ವತಿಯಿಂದ ಮೂರನೇ ವರ್ಷದ ಶ್ರೀಕೃಷ್ಣ ವೇಷ ಸ್ಪರ್ಧೆ -2024 ಕಾರ್ಯಕ್ರಮ ಆ. 25 ರಂದು ಆದಿಶಕ್ತಿ ಭಜನಾ ಮಂದಿರ (ರಿ ) ಬಾಲಾಡಿ ಇಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ತೀರ್ಪುಗಾರರಾಗಿ ಸಹಕರಿಸಿದ
ಯಕ್ಷಗಾನ ನಾಟ್ಯ ಗುರುಗಳಾದ ರಾಧಾಕೃಷ್ಣ ದೇವರಗದ್ದೆ, ಕೆ. ಎಸ್. ಎಸ್ ಕಾಲೇಜ್ ಸುಬ್ರಮಣ್ಯ ಶಿಕ್ಷಣ ಸಂಸ್ಥೆಯ ಉಪನ್ಯಾಸಕಾರದ ಶ್ರೀಮತಿ ಸುಮಿತ್ರ ಅರಂಪಾಡಿ ಮತ್ತು ಸಾಂಸ್ಕೃತಿಕ ಕಲಾವಿದೆ ರೇಣುಕಾ ಗೌಡ ಕುಲ್ಕುಂದ ದೀಪ ಬೆಳಗಿಸಿ ಚಾಲನೆ ನೀಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಕೋಟಿ ಗೌಡನ ಮನೆ, ಶಿವರಾಮ್ ನೆಕ್ರಾಜೆ, ಶ್ರೀ ಆದಿಶಕ್ತಿ ಭಜನಾ ಮಂದಿರ ಮಾಜಿ ಅಧ್ಯಕ್ಷರಾದ ಗಿರಿಯಪ್ಪ ಗೌಡ ಬಾಲಾಡಿ, ಹಾಲಿ ಉಪಾಧ್ಯಕ್ಷರಾದ ಜನಾರ್ಧನ ಗೌಡ ಕಟ್ಟ, ಯಕ್ಷಗಾನ ಗುರುಗಳಾದ ಲೋಕೇಶ್ ಮಡಿವಾಳ, ಕಾರ್ಯಕ್ರಮ ನಿರ್ವಾಹಕರು ಹಾಗೂ ನಾಟಿ ವೈದ್ಯರಾದ ಶ್ರೀನಿವಾಸ್ ಮುಗುಲಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆತ್ಮಿಕಾ ಪೂಜಾರಿಮನೆ ಪ್ರಾರ್ಥನೆ ನೆರವೇರಿಸಿದರು. ಕಲಾಮಾಯೆ ನಿರ್ದೇಶಕರಾದ ಸುಧೀರ್ ಏನೆಕಲ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಅಶೋಕ್ ಅಂಬೆಕಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಕಿರಿಯ, ಹಿರಿಯ ಪುಟಾಣಿ ಮಕ್ಕಳಿಂದ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಪೋಷಕರು, ಸಾರ್ವಜನಿಕರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
- Saturday
- November 23rd, 2024