
ಸುಳ್ಯ ಪೊಲೀಸ್ ಠಾಣೆಯಲ್ಲಿ ಆ.23 ರಂದು ಎಸ್.ಸಿ, ಎಸ್.ಟಿ. ಕುಂದುಕೊರತೆ ಸಭೆಯನ್ನು ನಡೆಸಲಾಯಿತು. ಸುಳ್ಯ ಠಾಣಾಧಿಕಾರಿಯವರಾದ ಈರಯ್ಯ ದೂಂತೂರುರವರ ಮುಂದಾಳತ್ವದಲ್ಲಿ ಸಭೆ ನಡೆದು ವರ್ತಮಾನದ ಸಮಸ್ಯೆಗಳ ಬಗ್ಗೆ ಮತ್ತು ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ದಲಿತ ಮುಖಂಡರುಗಳಾದ ನಂದರಾಜ್ ಸಂಕೇಶ, ಕರುಣಾಕರ ಪಲ್ಲತಡ್ಕ, ಶಂಕರ್ ಪೆರಾಜೆ, ಸಂಜೀವ ಪೈಚಾರು, ಸರಸ್ವತಿ ಬೊಳಿಯಮಜಲು,ಸೀತಾಲಕ್ಷ್ಮಿ, ವಿಜಯ ಆಲಡ್ಕ ಸಂಪಾಜೆ, ಪುಟ್ಟಣ್ಣ ವಳಿಕಜೆ, ಮಹೇಶ್ ಬೆಳ್ಳಾಲ್ಕರ್, ನಾರಾಯಣ ಕಿಲಂಗೋಡಿ, ತೇಜಸ್ ಕಲ್ಲುಗುಂಡಿ, ಸತೀಶ್ ಬೂಡುಮಕ್ಕಿ, ಚಂದ್ರಶೇಖರ ಪಲ್ಲತಡ್ಕ, ಪ್ರಕಾಶ್ ಪಾತೆಟ್ಟಿ, ಬಾಲಕೃಷ್ಣ ದೊಡ್ಡೇರಿ, ಹರೀಶ ಎಂ ಎಸ್ ಉಪಸ್ಥಿತರಿದ್ದರು. ಪೋಲಿಸ್ ಸಿಬ್ಬಂದಿಗಳಾದ ಪ್ರಕಾಶ್, ರಾಮಚಂದ್ರ, ಪದ್ಮಾವತಿ ಇವರುಗಳು ಸಹಕರಿಸಿದರು.