Ad Widget

ಶಾಲಾ ಮೈದಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ನಿಷೇಧ , ಶಾಂತಿ ಸಭೆ. ಶಾಲಾ ಮೈದಾನ ಹಿಂದಿನಂತೆ ಆಚರಣೆಗೆ ನೀಡಲು ಮನವಿ.

ಮೇಲಾಧಿಕಾರಿಗಳ ಜತೆ ಚರ್ಚಿಸಿದಾಗ ಅನುಮತಿ ಕೊಡಬಾರದೆಂದು ಹೇಳಿದ್ದಾರೆ – ಶೀತಲ್ ಯು ಕೆ .

. . . . . . . . .

ಸುಳ್ಯ: ಶಾಲಾ ಮೈದಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬಾರದೆನ್ನುವ ಸರಕಾರದ ಆದೇಶದ ಸುತ್ತೋಲೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಸಭೆ ಆಯೋಜನೆ ಮಾಡುವಂತೆ ಕೇಳಿಕೊಂಡಿರುವ ಮೇರೆಗೆ ಆ. 23 ರ ಸಂಜೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಂಜುನಾಥ್‌ ಜಿ ರವರ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಅಧ್ಯಕ್ಷರು, ಹಾಗೂ ಶಾಲಾ ಎಸ್.ಡಿ.ಎಂ.ಸಿ.ಯವರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಯಿತು.

. . . . . . .

ಪ್ರಮುಖವಾಗಿ ಸಭೆಯಲ್ಲಿ ಶಾಲಾ ಆವರಣದಲ್ಲಿ ಈ ಹಿಂದೆ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧ ಬೇಡ. ಹಿಂದಿನಂತೆಯೇ ಮುಂದುವರಿಯಲಿ ಎಂದು ಸರ್ವಪಕ್ಷಗಳ ನಾಯಕರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.

ತಹಶೀಲ್ದಾರ್ ಮಂಜುನಾಥರು, ಸರಕಾರದ ನಿಯಮಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದಾಗ, ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್‌ರವರು ಒಂದು ಶಾಲೆಯ ಕುರಿತಾಗಿ ಹೊರಡಿಸಿದ ಆದೇಶ ಆ ಸುತ್ತೋಲೆ. ಅದು ಇಲ್ಲಿಗೆ ಅನ್ವಯವಾಗಲಿಕ್ಕಿಲ್ಲ. ಮತ್ತು ಈ ಹಿಂದೆ ಸೌಹಾರ್ದವಾಗಿ ಕಾರ್ಯಕ್ರಮಗಳು ನಡೆಯುತ್ತಿತ್ತು. ಅದೇ ರೀತಿ ನಡೆಯಲು ಅನುಮತಿ ನೀಡಬೇಕಾಗಿದೆ” ಎಂದು ಹೇಳಿದರು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ.ಯವರು ಮಾತನಾಡಿ, ಇತ್ತೀಚೆಗೆ ಶಾಲೆಯಲ್ಲಿ ಅಹಿತಕರ ಘಟನೆ ನಡೆದ ಬಳಿಕ ಈ ಸುತ್ತೋಲೆಗೆ ಜೀವ ಬಂದಿದೆ ಅಲ್ಲದೇ
ಮೇಲಾಧಿಕಾರಿಗಳ ಜತೆ ಚರ್ಚಿಸಿದಾಗ ಅನುಮತಿ ಕೊಡಬಾರದೆಂದು ಹೇಳಿದ್ದಾರೆ. ನಿಯಮ ಮೀರಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ಅವರು ಸಭೆಯಲ್ಲಿ ಹೇಳಿದರು. ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ ಹಲವಾರು ವರ್ಷಗಳಿಂದ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ ಅದೇನು ಹೊಸದಾಗಿ ಆಗುವುದಲ್ಲ ಆದ್ದರಿಂದ ಅದು ನಡೆಯುವಂತೆ ಆಗಬೇಕು. ಶಾಲೆಯ ಅಭಿವೃದ್ಧಿ ಸಾರ್ವಜನಿಕರ ಸಹಭಾಗಿತ್ವ ದಿಂದಲೇ ಆಗುವುದು. ಈಗ ಕಾರ್ಯಕ್ರಮಗಳಿಗೆ ಅನುಮತಿ ಸಿಗದೇ ಇದ್ದರೆ ಶಾಲೆಯ ಅಭಿವೃದ್ಧಿ ಕುಂಠಿತವಾಗಬಹುದು. ಶಾಲಾಭಿವೃದ್ದಿ ಮತ್ತು ಸಂಘಟನೆಯವರು ಜವಾಬ್ದಾರಿ ತೆಗೆದುಕೊಳ್ಳಲಿ” ಎಂದು ಸಲಹೆ ನೀಡಿದರು.

ನ.ಪಂ. ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ ಯಥಾಸ್ಥಿತಿ ಮುಂದುವರಿಯಲಿ. ಹಾಗಂದ ಮಾತ್ರಕ್ಕೆ ಕೋಮು ಪ್ರಚೋದನಾ ಭಾಷಣ ಬೇಡ.ಆ ಕುರಿತು ಸಂಘಟನೆಯವರು ಜಾಗರೂಕತೆ ಇರಬೇಕು” ಎಂದು ಹೇಳಿದರು. ನ.ಪಂ. ಸದಸ್ಯ ಡೇವಿಡ್ ಧೀರಾ ಕ್ರಾಸ್ತ ಮಾತನಾಡಿ, ಚರ್ಚ್ ಆವರಣದಲ್ಲೇ ವಿದ್ಯಾಸಂಸ್ಥೆ ಇರುವುದು. ಅಲ್ಲಿ ಎಲ್ಲ ಹಬ್ಬಗಳು ನಡೆಯುತ್ತದೆ. ನಿರ್ಬಂಧ ಹೇರುವ ಕ್ರಮ ಬೇಡ” ಎಂದು ಹೇಳಿದರು.

ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ, ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಎನ್‌.ಜಯಪ್ರಕಾಶ್ ರೈ, ಮೀನುಗಾರಿಕಾ ನಿಗಮ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಜೆಡಿಎಸ್ ಅಧ್ಯಕ್ಷ ಸುಕುಮಾ‌ರ್ ಕೋಡ್ತುಗುಳಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ, “ಹಲವು ವರ್ಷಗಳಿಂದ ಧಾರ್ಮಿಕ ಆಚರಣೆಗಳು ಶಾಲೆಗಳಲ್ಲಿ ಇವೆ. ಅದು ಯಥಾಸ್ಥಿತಿಯಲ್ಲಿ ಮುಂದುವರಿಸಲಿ. ಊರವರೇ ಸೇರಿ ಮಾಡುವ ಕ್ರೀಡಾ ಕೂಟಗಳು ಅವು” ಎಂದು ಹೇಳಿದರು. ಎಸ್.ಐ. ಈರಯ್ಯರು ಕಾನೂನು ನಿಯಮಗಳ ಕುರಿತು ವಿವರ ನೀಡಿದರು.

ಸಭೆಯಲ್ಲಿ ನ.ಪಂ.ಮಾಜಿ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ,ನ.ಪಂ ಸದಸ್ಯ ರಾಜು ಪಂಡಿತ್, ಸುಳ್ಯ ಸ.ಪ.ಪೂ. ಕಾಲೇಜು ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ರಾಜೇಶ್ವರಿ ಕಾಡುತೋಟ, ಉಬರಡ್ಕ ಯುವಕ ಮಂಡಲದ ದೇವಪ್ಪ ಆಚಾರ್ಯ ಕಲ್ಟಾರ್, ರಾಜೇಶ್ ರೈ ಉಬರಡ್ಕ, ನಂದರಾಜ ಸಂಕೇಶ, ಭಗವತೀ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್‌ ಕೇರ್ಪಳ, ಕೇರ್ಪಳ ಯುವಕ ಮಂಡಲದ ಗೌರವಾಧ್ಯಕ್ಷ ಶಿವಪ್ರಸಾದ್ ಕೇರ್ಪಳ, ಅರಂಬೂರು ಭಜನಾ ಮಂದಿರದ ರತ್ನಾಕರ ರೈ ಅರಂಬೂರು, ಅಜ್ಜಾವರ ಗ್ರಾ.ಪಂ. ಸದಸ್ಯ ಅಬ್ದುಲ್ಲ , ಗ್ರೀನ್ ಬಾಯ್ಸ್ ಬಳಗದ ಅಬ್ದುಲ್ ರಶೀದ್ ಜಟ್ಟಿಪಳ್ಳ,ಮೇನಾಲ ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ನಯನ ರೈ ಮೇನಾಲ, ಸಯನಿಲ್ ರೈ ಮೇನಾಲ, ಬಾಲಕೃಷ್ಣ ಮೇನಾಲ, ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ ಮಲೆ ಹಾಗೂ ರಂಜನ್ ಕಲ್ಕುದಿ, ಶಿಕ್ಷಣ ಸಂಯೋಜಕಿ ಧನಲಕ್ಷ್ಮೀ ಕುದ್ದಾಜೆ,ಈ ಸಭೆಯಲ್ಲಿ ಸುಳ್ಯ ಹಾಗೂ ಬೆಳ್ಳಾರೆ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading