
ಕೆನರಾ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಮಾಹಿತಿ ಕಾರ್ಯಗಾರ

ಕಲ್ಲುಗುಂಡಿ: ರಾಷ್ಟ್ರೀಕ್ತೃತ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ವತಿಯಿಂದ ಸಿಗುವ ಜನಸುರಕ್ಷಾ ಅಭಿಯಾನ, ಪ್ರದಾನಮಂತ್ರಿ ಜೀವನ್ ಜ್ಯೋತಿ, ಬೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ, ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ, ಹಾಗೂ ಇನ್ನಿತರ ಹಲವು ಯೋಜನೆಗಳು ಮತ್ತು ಬ್ಯಾಂಕಿಂಗ್ ಬಗ್ಗೆ ಆಟೋ ಚಾಲಕರಿಗೆ ಕೆನಾರ ಬ್ಯಾಂಕ್ ವತಿಯಿಂದ ಶ್ರೀಮತಿ ಸುಜಾತ ಆರ್ಥಿಕ ಸಾಕ್ಷರತಾ ಕೇಂದ್ರ ಆಮೂಲ್ಯ ಸುಳ್ಯ ಮತ್ತು ಯೂನಿಯನ್ ಬ್ಯಾಂಕ್ ಆಪ್ತ ಸಮಲೋಚಕಿ ಪ್ರಿಯಾ ಅವರು ಉತ್ತಮವಾಗಿ ಮಾಹಿತಿ ನೀಡಿದರು.
ಸಂಘದ ಸದಸ್ಯರಿಗೆ ಕೆನರಾ ಬ್ಯಾಂಕ್ ಯೂನಿಯನ್ ಬ್ಯಾಂಕ್ ವತಿಯಿಂದ ವಿಮೆ ನೋಂದವಾಣೆ ಮಾಡಲಾಯಿತು.
ಕಲ್ಲುಗುಂಡಿ B.M.S ಘಟಕದ ವತಿಯಿಂದ ರಕ್ಷಾಬಂದನವನ್ನು ಆಚರಿಸಲಾಯಿತು..

ಸಭೆಯಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ಸದಸ್ಯರು ಹಾಗೂ ನಮ್ಮ B.M.S ಸಂಘದ ಸದಸ್ಯರಾದ ಚಿದಾನಂದ ಮೂಡನಕಜೆ ಅವರನ್ನು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಕಲ್ಲುಗುಂಡಿ ಘಟಕದ ಅಧ್ಯಕ್ಷರು ಕೇಶವ ಬಂಗ್ಲೆಗುಡ್ಡೆ ವಹಿಸಿದರು. ಕಾರ್ಯಕ್ರಮವನ್ನು ರವಿಕುಮಾರ್ ನಿಡಿಂಜಿ ನಿರೂಪಣೆ ಮಾಡಿದರು.ಸಭೆಯಲ್ಲಿ ಗೌರವ ಅದ್ಯಕ್ಷರು ವಸಂತ ಎನ್.ಟಿ ಉಪಾಧ್ಯಕ್ಷರು ಜಗದೀಶ್ ಗೂನಡ್ಕ ಕಾರ್ಯದರ್ಶಿ ಪ್ರಮೋದ್ ಕೈಪಡ್ಕ ಖಜಾಂಜಿ ಕೃಷ್ಣಪ್ರಸಾದ್ ಕಾಪಿಲ ಸಂಘದ ನಿರ್ದೇಕರುಗಳು ಮತ್ತು ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.