ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ
ದಲ್ಲಿ ದಿನಾಂಕ 21/08/2024 ರಂದು ಬೆಂಗಳೂರು ಫಾರ್ಮಸ್ಯುಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ಸಹಯೋಗದೊಂದಿಗೆ ನಡೆಯಲಿರುವ ಎರಡು ದಿನದ ‘ಸಕ್ಷಮ್’ ಕಾರ್ಯಾಗಾರವನ್ನು
ಕಾರ್ಯಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಲೀಲಾಧರ ಡಿ.ವಿ. ಯವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಬೆಂಗಳೂರು ಫಾರ್ಮಸ್ಯುಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ತರಬೇತುದಾರರಾದ ಶ್ರೀ ಹರಿ ಪಿ ಗುಪ್ತ ಇವರು ಕಾರ್ಯಗಾರದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಷವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತ ಎಂ, ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರು, ಕಾಲೇಜಿನ ಕಿರಿಯ ವೈದ್ಯರುಗಳು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಫಾರ್ಮಸಿಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅನುಸಾರ, ಕಾಲೇಜಿನ ಕಿರಿಯ ವೈದ್ಯರುಗಳು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಂವಹನ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಎರಡು ದಿನದ ‘ಸಕ್ಷಮ್’ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಗಾರವನ್ನು ನವದೆಹಲಿಯಿಂದ ಪರಿಣತಿ ತರಬೇತುದಾರರಾಗಿ ನಿಯುಕ್ತರಾದ ಶ್ರೀ ಹರಿ ಪಿ ಗುಪ್ತ ಇವರು ನಡೆಸಿಕೊಡಲ್ಲಿದ್ದಾರೆ.
ಕಾರ್ಯಕ್ರಮವನ್ನು ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಯಾದ ಡಾ. ಅಪೂರ್ವ ನಿರೂಪಿಸಿದರು. ಡಾ. ಶುಭಶ್ರೀ, ಡಾ. ರೇಣುಕಾ ಮತ್ತು ಡಾ. ತನುಶ್ರೀ ಪ್ರಾರ್ಥಿಸಿದರು ಹಾಗೂ ಕಾರ್ಯಗಾರದ ತರಬೇತುದಾರರ ಪರಿಚಯವನ್ನು ಡಾ. ಅನುಷಾ ಮಡಪ್ಪಾಡಿ ಇವರು ಮಾಡಿದರು.