Ad Widget

ಗುತ್ತಿಗಾರು : ಬೃಹತ್ ರಕ್ತದಾನ ಶಿಬಿರ – ರಕ್ತ ದಾನಿಗಳಿಗೆ ಸನ್ಮಾನ ಮತ್ತು  ಗೌರವ ಸಮರ್ಪಣೆ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಇದರ ವತಿಯಿಂದ ಗ್ರಾಮ ಪಂಚಾಯತ್ ಗುತ್ತಿಗಾರು, ಅರೋಗ್ಯ ಕೇಂದ್ರ ಗುತ್ತಿಗಾರು, ಜಿಲ್ಲಾ ಮತ್ತು ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಸುಳ್ಯ ಅಮರ ಸಂಜೀವಿನಿ ಗ್ರಾಮದ ಮಟ್ಟದ ಒಕ್ಕೂಟ ಗುತ್ತಿಗಾರು, ಲಯನ್ಸ್ ಕ್ಲಬ್ ಗುತ್ತಿಗಾರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ರಕ್ತದಾನಿಗಳಿಗೆ ಸನ್ಮಾನ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವು ಪ. ವರ್ಗದ ಸಭಾಭವನ ಗುತ್ತಿಗಾರು ಇಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಒಟ್ಟು 65ಜನ ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಪುನರ್ಜನ್ಮ ನೀಡಿದರು. ಕಾರ್ಯಕ್ರಮ ದಲ್ಲಿ ಸಾಮಾಜಿಕ ಮುಖಂಡರುಗಳಾದ ಭರತ್ ಮುಂಡೋಡಿ, ಕೇಶವ್ ಭಟ್ ಮುಳಿಯ, ಅಶೋಕ್ ನೆಕ್ರಾಜೆ ಅವರನ್ನು ಗೌರವಿಸಲಾಯಿತು. ಮತ್ತು ರಕ್ತದಾನ ಮಾಡಿದ ಪ್ರತಿಯೊಬ್ಬರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪಿಎಸಿ ಬ್ಯಾಂಕ್ ಅಧ್ಯಕ್ಷ ವೆಂಕಟ್ ದಂಬೆಕೋಡಿ, ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಸುಧಾಕರ್ ರೈ,ಹಿರಿಯಡ್ಕ ಲಯನ್ಸ್ ಅಧ್ಯಕ್ಷ ಸುಧೀರ್, ನಿವೃತ್ತ ಸೈನಿಕ ರವೀಂದ್ರ ನಾಥ್,ಗುತ್ತಿಗಾರು ಲಯನ್ಸ್ ಅಧ್ಯಕ್ಷ ಕುಶಾಲಪ್ಪ ಮಾಸ್ತರ್, ಅಮರ ಸಂಜೀವಿನಿ ಒಕ್ಕೂಟ ಉಪಾಧ್ಯಕ್ಷ ಸವಿತಾ ಕುಳ್ಳಂಪಡಿ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ,ನಿವೃತ್ತ ಪಿಡಿಓ ಪುರುಷೋತ್ತಮ್ ಮಣಿಯಾನ ಮನೆ, ಪಂಚಾಯತ್ ಸದಸ್ಯೆ ಲತಾ ಕುಮಾರಿ ಅಜಡ್ಕ, ಅರೋಗ್ಯ ಅರೋಗ್ಯ ಪರಿವಿಕ್ಷ ಬಸವರಾಜ್, ತಾಲೂಕು ರೆಡ್ ಕ್ರಾಸ್ ನಿರ್ದೇಶಕ ಶಿವಪ್ರಸಾದ್ ಕಡವೆಪಳ್ಳ ಮಿತ್ರ ಕುಮಾರಿ ಚಿಕ್ಮುಳಿ, ಯಮಿತ ಪೂರ್ಣಚಂದ್ರ ಮತ್ತು ಜಂಟಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ದಿವ್ಯಾ ಹರೀಶ್ ಚತ್ರಪ್ಪಾಡಿ ಪ್ರಾರ್ಥನೆ ಸಲ್ಲಿಸಿದರು. ಕಲ್ಪನ ಎರ್ದಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಮೀನಾಕ್ಷಿ ಪಾರೆಮಜಲು ವಿಶೇಷ ಚೇತನ ತಾಯಿ ಮತ್ತು ಮಕ್ಕಳಾದ ಕುಶ್ವತ್ ಪಾರೆಮಜಲು, ರಕ್ಷಿತ್ ಪಾರೆಮಜಲು, ಒಂದೇ ಮನೆಯ ಸದಸ್ಯರು ರಕ್ತದಾನ ಮಾಡಿದರೆ, ತನ್ನ ಕೈ ಪ್ಯಾಚ್ಚರ್ ಆದರೂ ರಕ್ತದಾನ ಮಾಡುವ ಮೂಲಕ ಕಿಶೋರ್ ಕುಮಾರ್ ಉತ್ರಂಬೆ ಸಮಾಜಕ್ಕೆ ಮಾದರಿಯಾದರು.
ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅಥಿತಿಗಳಾಗಿ ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಚಾರ್ಮಾತ, ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ, ಅಧ್ಯಾಪಕ ಚಂದ್ರಶೇಖರ ಪಾರೆಪ್ಪಾಡಿ,ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಕೇಶ್ ಮೆಟ್ಟಿನಡ್ಕ,ಜಿಲ್ಲಾ ರೆಡ್ ಕ್ರಾಸ್ ಪ್ರತಿನಿಧಿ ಪ್ರವೀಣ್, ಆಶಾ ಕಾರ್ಯಕರ್ತೆ ಜಯ ಬಳ್ಳಕ,ರಾಜೇಶ್ ಉತ್ರಂಬೆ, ಮೋಹನ್ ಮುಕ್ಕೂರ್, ಮೋಹನ್ ದಾಸ್ ಶಿರಾಜೆ, ಲತಾ ಅಡ್ಕಾರ್,ಟ್ರಸ್ಟ್ ಕೋಶಾಧಿಕಾರಿ ಸುಕುಮಾರ್ ಕೋಡಂಬು ಉಪಸ್ಥಿತರಿದ್ದರು.

ರಕ್ತದಾನ ಶಿಬಿರದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಸ್ವಯಂ ಸೇವಕಿಯಾಗಿ ಮಾದರಿಯಾದ ಮತ್ತು ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿ ಜೀವಿತ ಮೋಟ್ನೂರು ಅವರನ್ನು ಗೌರವಿಸಲಾಯಿತು. ವಿಜೇತ್ ದೊಡ್ಹಿಹಿತ್ಲು ಕಾರ್ಯಕ್ರಮ ನಿರೂಪಿಸಿದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!