
ಮೆಸ್ಕಾಂನ ನಿವೃತ್ತ ಅಧಿಕಾರಿ ಕೆದಂಬಾಡಿ ಚಂದ್ರಶೇಖರ್ ರವರ ಧರ್ಮಪತ್ನಿ ವೇದಾವತಿ ಯುವರು ಇಂದು ( ಆ.21) ಮುಂಜಾನೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಇಂಗ್ಲೆಂಡ್ ನಲ್ಲಿ ನೆಲೆಸಿರುವ ತೇಜಸ್ವಿ, ಮಂಗಳೂರಿನಲ್ಲಿ ನರರೋಗ ತಜ್ಞರಾಗಿರುವ ಡಾ.ರಕ್ಷಿತ್ ಕೆದಂಬಾಡಿ, ಅಮೇರಿಕಾದಲ್ಲಿ ನೆಲೆಸಿರುವ ಮಗಳು ಸೌರಭ ರನ್ನು ಅಗಲಿದ್ದಾರೆ.
ಮೃತರು ಅಂತ್ಯಕ್ರಿಯೆ ನಾಳೆ ಸುಳ್ಯದ ವಿಮುಕ್ತಿ ಧಾಮದಲ್ಲಿ ಸುಮಾರು 12.30 ಕ್ಕೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ 12 ರ ತನಕ ಕಾಲೇಜು ರಸ್ತೆಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನ ಕ್ಕೆ ಅವಕಾಶವಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.