Ad Widget

ಅಮ್ಮ ಚಿಣ್ಣರ ಮನೆಯ ಪೋಷಕ ಸಮಿತಿ ರಚನೆ – ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ., ಉಪಾಧ್ಯಕ್ಷರುಗಳಾಗಿ ಹರಿಪ್ರಸಾದ್ ಅತ್ಯಾಡಿ, ನಿಶ್ಮಿತಾ ಧನಂಜಯ

ಅಮ್ಮ ಚಿಣ್ಣರ ಮನೆಯ ಪೋಷಕ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.  ಅಧ್ಯಕ್ಷರಾಗಿ ಪ್ರೀತಮ್ ಡಿ.ಕೆ., ಉಪಾಧ್ಯಕ್ಷರುಗಳಾಗಿ ಹರಿಪ್ರಸಾದ್ ಅತ್ಯಾಡಿ, ನಿಶ್ಮಿತಾ ಧನಂಜಯ, ಸದಸ್ಯರಾಗಿ ಲಕ್ಷ್ಮಣ್, ಯತೀಶ್, ಶ್ವೇತಾ ಉದಯ್, ಜೀವಿತಾ ಸಂದೇಶ್, ರೋಹಿಣಿ ಕುಲದೀಪ್, ವನಿತಾ ಶಶಿಕುಮಾರ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೈಲೇಶ್ ಅಂಬೆಕಲ್ಲು, ಶಿಕ್ಷಕಿ ಅಶ್ವಿನಿ ಹಾಗೂ ಎಲ್ಲಾ ಪೋಷಕರು ಉಪಸ್ಥಿತರಿದ್ದರು.

ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯ ಜಾನಿ. ಕೆ.ಪಿ ಅವರಿಂದ ದ.ಕ.ಜಿಲ್ಲೆಯ ವಿವಿಧ ಕಾರ್ಮಿಕ ಅಧಿಕಾರಿಗಳ ಬೇಟಿ

ಆ.19 .ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಡಳಿತ ಮಂಡಳಿ ಸದಸ್ಯ ಜಾನಿ. ಕೆ.ಪಿ ಅವರಿಂದ ದ.ಕ ಜಿಲ್ಲೆಯ ಅಸಿಸ್ಟೆಂಟ್ ಲೇಬರ್ ಕಮಿಷನರ್ (ALC) ನಝಿಯಾ ಸುಲ್ತಾನ್ ಮತ್ತು ಜಿಲ್ಲಾ ಲೇಬರ್ ಆಫೀಸರ್ ಗಳಾದ ವಿಲ್ಮಾ ಮತ್ತು ಕುಮಾರ್ ಅವರನ್ನು ಬೇಟಿ ಮಾಡಿ ಜಿಲ್ಲೆಯ ಕಾರ್ಮಿಕರ ವಿವಿಧ ಸಮಸ್ಯೆಗಳು ಮತ್ತು ಮಂಡಳಿಯಿಂದ ದೊರಕಬೇಕಾದ ಸಹಕಾರದ ಬಗ್ಗೆ...
Ad Widget

ಮಂಗಳೂರು: ಮೀನುಗಾರರಿಂದ ಸಮುದ್ರ ಪೂಜೆ

*ಸಮೃದ್ಧ ಮೀನುಗಾರಿಕೆಗೆ ಹಾರೈಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ* ಮಂಗಳೂರು: ಮೀನುಗಾರರ ಶ್ರೇಯೋಭಿವೃದ್ದಿಗಾಗಿ ತಣ್ಣೀರುಬಾವಿ ಮೊಗವೀರ ಮಹಾಸಭಾ (ರಿ) ಇದರ ವತಿಯಿಂದ ಚಿತ್ರಾಪುರ ಕಡಲ ಕಿನಾರೆಯಲ್ಲಿ ಆ. 19ರಂದು ಸಮುದ್ರ ಪೂಜೆ ನಡೆಯಿತು. ಸಮುದ್ರರಾಜನಿಗೆ ಹಾಲು, ಫಲ ಅರ್ಪಿಸಿ, ಸಮುದ್ರ ಪೂಜೆಯಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಿದ್ಯಾರ್ಥಿ ಪರಿಷತ್ ಇದರ ಸಹಯೋಗದೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿನೇಶ ಪಿ. ಟಿ ಪ್ರಾಂಶುಪಾಲರು, ಕೆ.ಎಸ್. ಎಸ್ ಕಾಲೇಜು ಸುಬ್ರಹ್ಮಣ್ಯ ಇವರು ವಹಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ಚಿ.ನಾ ಸೋಮೇಶ್, ಧಾರ್ಮಿಕ ಚಿಂತಕರು ಕೊಡಗು...

ವಳಲಂಬೆ : ಚಲನಚಿತ್ರ ನಟಿ ಹೇಮಾ ಗೌಡರಿಂದ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ಕೊಡುಗೆ

ವಳಲಂಬೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಬ್ಯಾಗ್,  ಅಂಗನವಾಡಿ ಸಿಬ್ಬಂದಿಗಳಿಗೆ ಸಾರಿ ಹಾಗೂ ಸಿಹಿತಿಂಡಿಯನ್ನು ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿನಿಯಾದ ಚಲನಚಿತ್ರ ನಟಿ ಹೇಮಾ ಗೌಡ ಮೊಟ್ನೂರು ಮತ್ತು ಮನೆಯವರು ನೀಡಿ ಸಹಕರಿಸಿದ್ದಾರೆ.ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸ್ವಾತಿ ಹೂವನ, ಅಂಗನವಾಡಿ ಮಕ್ಕಳು, ಕಾರ್ಯಕರ್ತೆ, ಸಹಾಯಕಿ ಹಾಗೂ ಪೋಷಕರು ಉಪಸ್ಥಿತರಿದ್ದರು. 

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಚಂದ್ರಶೇಖರ ಕೋನಡ್ಕ, ಕಾರ್ಯದರ್ಶಿಯಾಗಿ  ಮೋಹನ ಅಂಬೆಕಲ್ಲು,  ಮೋನಪ್ಪ ಕೊಳಗೆ ಖಜಾಂಜಿಯಾಗಿ ಆಯ್ಕೆಗೊಂಡಿದ್ದು, ನಿರ್ದೇಶಕರಾಗಿ ಲಕ್ಷ್ಮೀಶ ಶಿರೂರು, ಅಭಿಲಾಷ್ ಗೌಡ ಮಣಿಯಾನ, ಸವಿನ್ ಚಾಂತಾಳ, ಸಚಿನ್ ನಿಡುಬೆ, ನಮಿತಾ ಗೋಳ್ಯಾಡಿ, ಅರ್ಪಿತಾ ಮಿತ್ತೋಡಿ, ಗೌರವ ಸಲಹೆಗಾರರಾಗಿ, ಬಾಲಸುಬ್ರಹ್ಮಣ್ಯ ಎನ್.ಜಿ,ಕಮಲ.ಎ ಮುಖ್ಯೋಪಾಧ್ಯಾಯರು ಆಯ್ಕೆಗೊಂಡರು.

ಕಾಂಗ್ರೇಸ್ ಪಕ್ಷದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ – ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿದ ನಂತರ ಕಾಂಗ್ರೇಸ್ ಪಕ್ಷದ ನಾಯಕರು ರಾಜ್ಯದಲ್ಲಿ ಅರಾಜಕತೆ ಯನ್ನು ಸೃಷ್ಟಿಸಲು ಯತ್ನಿಸುತ್ತಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಬೇಜವಾಬ್ದಾರಿ ಯುತವಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿ...
error: Content is protected !!