ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತ್ತಡ್ಕ ಇದರ ಸಹಭಾಗಿತ್ವದಲ್ಲಿ ಸೆ.06 ಶುಕ್ರವಾರದಿಂದ ಸೆ.08 ಆದಿತ್ಯವಾರದವರೆಗೆ ಮೂರು ದಿನಗಳ ಕಾಲ ನಡೆಯಲಿರುವ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಆ.15 ರಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರು ಹಾಗೂ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಸನ್ನ ಗೊರ್ತಿಲ, ದೇವಳದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್, ಗಣೇಶೋತ್ಸವ ಸಮಿತಿಯ ಖಜಾಂಜಿ ಯಕ್ಷಿತ್ ಕಜೆಗದ್ದೆ, ಹಿಮ್ಮತ್ ಕಿರಿಭಾಗ, ಅಜೇಯ ಪೊಯ್ಯೆಮಜಲು, ಪ್ರಕಾಶ್ ಕುಕ್ಕುಂದ್ರಡ್ಕ, ಜನಾರ್ದನ ಗುಂಡಿಹಿತ್ಲು, ಮೋನಪ್ಪ ನೀರ್ಪಾಡಿ, ಜಯರಾಮ್ ಕರಂಗಲ್ಲು, ರಾಕೇಶ್ ಮುಳ್ಳುಬಾಗಿಲು, ರಾಮಕೃಷ್ಣ ನೆತ್ತಾರ, ಉಲ್ಲಾಸ್ ಮುಚ್ಚಾರ, ರಾಧಾಕೃಷ್ಣ ಕಟ್ಟೆಮನೆ, ರಾಜೇಶ್ ಕಿರಿಭಾಗ, ಯಕ್ಷಿತ್ ಬೆಟ್ಟುಮಕ್ಕಿ, ದಿನೇಶ್ ಕಿರಿಭಾಗ ಹಾಗೂ ಡಾ| ಸೋಮಶೇಖರ್ ಕಟ್ಟೆಮನೆ ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- December 4th, 2024