ಇವರು ಪೆರಾಜೆ ಪ್ರತಿಷ್ಟಿತ ಕುಟುಂಬ ಕುಂದಲ್ಪಾಡಿಯ ಅಳಿಯ.
ಬೆಳ್ತಂಗಡಿ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. ಉಜಿರೆ ಎಸ್ ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು,ಇವರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಲಪಾಡಿ ಚಂದ್ರಶೇಖರ ಗೌಡ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರಿ ಚಂದ್ರಕಲಾರವರ ಪತಿ, ವಕೀಲ ಶೇಖರ್ ಗೌಡ ,ಹಲವು ವರ್ಷಗಳಿಂದ ದೆಹಲಿಯಲ್ಲಿ ನೆಲೆಸಿರುವ ಇವರು ಸುಪ್ರೀಂ ಕೂರ್ಟ್ ನ ಹೆಸರಾಂತ ವಕೀಲರು , ಪ್ರಸ್ತುತ ಸುಪ್ರಿಂ ಕೋರ್ಟ್ ನ ಹಿರಿಯ ವಕೀಲರಾಗಿ ಆಯ್ಕೆಯಾಗಿದ್ದು ಅಳಿಯನ ಸಾಧನೆಗೆ ಕುಂದಲ್ಪಾಡಿ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.