- Thursday
- November 21st, 2024
ಇವರು ಪೆರಾಜೆ ಪ್ರತಿಷ್ಟಿತ ಕುಟುಂಬ ಕುಂದಲ್ಪಾಡಿಯ ಅಳಿಯ. ಬೆಳ್ತಂಗಡಿ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ. ಉಜಿರೆ ಎಸ್ ಡಿ.ಎಮ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು,ಇವರು ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ಕುಂದಲಪಾಡಿ ಚಂದ್ರಶೇಖರ ಗೌಡ ಮತ್ತು ಶ್ರೀಮತಿ ಜಾನಕಿ ದಂಪತಿಗಳ ಪುತ್ರಿ ಚಂದ್ರಕಲಾರವರ ಪತಿ, ವಕೀಲ...
ಪಂಜ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜಹೋಬಳಿ ಘಟಕದ ವತಿಯಿಂದ ಸ್ವಾತಂತ್ರ್ಯ ನಂತರ ನಾಡಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರ ಸಂಸ್ಮರಣೆ ಕಾರ್ಯಕ್ರಮವು ಆ.15 ರಂದು ಹೋಬಳಿ ಘಟಕದ ಅಧ್ಯಕ್ಷರಾದ ಬಾಬುಗೌಡ ಅಚ್ರಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷರಾದ ಚಂದ್ರಶೇಖರ ಪೇರಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ...
ಆ.18. ಕಟ್ಟಡ ಕಾರ್ಮಿಕರ ಸಂಘ ಚೆಂಬು ಘಟಕದ ವತಿಯಿಂದ, ದೇಶದ ಪ್ರತಿಷ್ಠಿತ ಕಲ್ಯಾಣ ಮಂಡಳಿಯಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಢಳಿತ ಮಂಡಳಿ ಸದಸ್ಯರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ನಿಯೋಜಿಸಲ್ಪಟ್ಟ ಜಾನಿ.ಕೆ.ಪಿ ಇವರನ್ನು ಸುಳ್ಯ ತಾಲೂಕಿನ ಹಿರಿಯ ಕಾರ್ಮಿಕ ನಾಯಕರಾದ ನಾಗರಾಜ್ ಹೆಚ್.ಕೆ,ಆನಂದ ಗೌಡ,ಕೃಷ್ಣ ಕೇರ್ಪಳ,ವಸಂತ ಪೆಲ್ತಡ್ಕ, ರಾಜ್ಯ ಮಹಿಳಾ ಸಮಿತಿ ಸದಸ್ಯೆಯಾದ ಭಾರತಿ.ಬಿ ಹಾಗೂ ವಲಯ...
ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಹಾಗೂ ಮಯೂರಿ ಯುವತಿ ಮಂಡಲ (ರಿ) ಚೊಕ್ಕಾಡಿ ಇದರ ಜಂಟಿ ಆಶ್ರಯದಲ್ಲಿ ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೇಜಿ ನೆಡುವ ಪ್ರಾತ್ಯಕ್ಷಿಕೆ ಮತ್ತು ನೇಜಿ ನೆಡುವ ಕಾರ್ಯಕ್ರಮವು ಆ.18 ರಂದು ಅಚ್ಚಿಪಳ್ಳ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಅಜ್ಜನಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮತ್ತು ಮುಖ್ಯೋಪಾಧ್ಯಾಯರಾದ...
ಸುಬ್ರಹ್ಮಣ್ಯ: ಸಂಸ್ಕೃತ ಅನ್ನುವುದು ಸಂಪ್ರದಾಯಿಕ ಭಾಷೆ. ಜಾತಿ ಧರ್ಮ ಮೀರಿದ ಈ ಭಾಷೆಯನ್ನು ಸರ್ವರೂ ಅತ್ಯಂತ ಪ್ರೀತಿಯಿಂದ ಅನುಸರಿಸುತ್ತಿರುವುದು ಸಂತಸಕರ. ಈ ಭಾಷೆಯು ಸರ್ವ ಸಮುದಾಯಗಳ ಭಾಷೆಯಾಗಿ ಪ್ರಗತಿಯಾಗಿದೆ.ಅತ್ಯಂತ ಸಂಸ್ಕರಿಸಲ್ಪಟ್ಟುದು ಸಂಸ್ಕೃತ.ನಮ್ಮ ಭಾವನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾತಿನ ಮೂಲಕ ವ್ಯಕ್ತಪಡಿಸುವ ಉತ್ಕೃಷ್ಠ ಮಾಧ್ಯಮ ಸಂಸ್ಕೃತ.ಸರ್ವ ಭಾರತೀಯರು ಮಾತ್ರವಲ್ಲದೆ ವಿಶ್ವ ಸ್ವೀಕಾರಾರ್ಹ ಭಾಷೆ ಸಂಸ್ಕೃತ ಎಂದು ಜಿಲ್ಲಾ...
ಗುತ್ತಿಗಾರಿನ ಶ್ರೀಕೃಷ್ಣ ಭಜನಾ ಮಂಡಳಿ ವತಿಯಿಂದ ಆಚರಿಸ್ಪಡುತ್ತಿರುವ ಅಷ್ಟಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಆ.17 ರಂದು ನಡೆಯಿತು. ಈ ಸಂದರ್ಭದಲ್ಲಿ ರವಿಪ್ರಕಾಶ್ ಬಳ್ಳಡ್ಕ, ಪೂರ್ಣಚಂದ್ರ ಪೈಕ, ಆನಂದ ಆಚಾರ್ಯ, ಲೀಲಾಧರ ಅಡ್ಡನಪಾರೆ, ನಾರಾಯಣ ಕುಚ್ಚಾಲ, ರಮೇಶ್ ಮೆಟ್ಟಿನಡ್ಕ, ಮೋಹನ ಆಚಳ್ಳಿ, ಸುಕೇಶ್ ಚಾರ್ಮತ, ಶ್ರೀಮತಿ ದಮಯಂತಿ ರವೀಂದ್ರ ಉಪಸ್ಥಿತರಿದ್ದರು.
ಯುವಕ ಮಂಡಲ (ರಿ ) ಚೊಕ್ಕಾಡಿ ಮತ್ತು ಮಯೂರಿ ಯುವತಿ ಮಂಡಲ(ರಿ) ಚೊಕ್ಕಾಡಿ ಗಳ ಜಂಟಿ ಆಶ್ರಯದಲ್ಲಿ ಕೆಸರುಡೊಂಜಿ ದಿನ 2024 ಕೆಸರುಗದ್ದೆ ಕ್ರೀಡಾಕೂಟವು ಅಮರಮಡ್ನೂರು ಗ್ರಾಮದ ಚೆನ್ನಪರಿ ಎಂಬಲ್ಲಿಯ ಅಚ್ಚಿಪಳ್ಳ ಗದ್ದೆಯಲ್ಲಿ ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಜರುಗಿತು.ಸಾರ್ವಜನಿಕ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ, ಆಟೋಟ ಸ್ಪರ್ಧೆಗಳು, ಗುಂಪು ಆಟಗಳು ಮತ್ತು ವಿವಿಧ ಮನೋರಂಜನಾ ಆಟಗಳು ನಡೆದವು.ಚೊಕ್ಕಾಡಿ...
ರಾಜ್ಯದ ಅಭಿವೃದ್ದಿಯ ಹರಿಕಾರ, ಗ್ಯಾರೆಂಟಿಗಳ ಸರದಾರ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಇಲ್ಲದೆ ಈ ನಾಡಿನ 2 ನೇ ಅವಧಿಗೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆ ನಡೆಸಲು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಮತ್ತು ಕೇಂದ್ರ ಸರಕಾರವು ರಾಜ್ಯಭವನವನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಹೊರಟಿರುವುದನ್ನು ಸುಳ್ಯ ತಾಲೂಕು ಮಹಿಳಾ ಕಾಂಗ್ರೆಸ್ ಘಟಕ...
ಸಧೃಡವಾಗಿ ಸುಭದ್ರವಾಗಿ ಇರುವ ಸಿದ್ದರಾಮಯ್ಯ ಸರ್ಕಾರವನ್ನು ತೆಗೆದು ಹಾಕಲು ಬಿಜೆಪಿ ಪಕ್ಷದವರು ರಾಜಭವನವನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಪ್ರಾಸಿಕ್ಯೂಶನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದು ಸದರಿ ಅನುಮತಿ ಬಿಜೆಪಿ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಇದು ಖಂಡನೀಯ ಎಂದು...
Loading posts...
All posts loaded
No more posts