ಸುಳ್ಯ: ತಾಲೂಕಿನ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ವಿನುತಾ ಪಾತಿಕಲ್ಲು, ಪ್ರಧಾನ ಕಾರ್ಯದರ್ಶಿಯಾಗಿ ಜಾನಕಿ ಕಣೆಮರಡ್ಕ ಹಾಗೂ ಕೋಶಾಧಿಕಾರಿಯಾಗಿ ಹಸೀಸ್ ಶಾಲೆಕ್ಕಾರ್ ಆಯ್ಕೆಯಾಗಿದ್ದಾರೆ.
ಗುರುವಾರ ಶಾಲಾ ಸಭಾಂಗಣದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಗೌರವಾಧ್ಯಕ್ಷರಾಗಿ
ಅನಂತಕೃಷ್ಣ ಚಾಕೋಟೆ, ಉಪಾಧ್ಯಕ್ಷರಾಗಿ ಸಂಧ್ಯಾ ಮಾವಂಜಿ, ಶ್ರೀಹರಿ ಬೊಳುಗಲ್ಲು, ಮಧುರ ಮಾವಂಜಿ, ಕಾರ್ಯದರ್ಶಿಗಳಾಗಿ ವಿನಯ ಉಗ್ರಾಣಿಮನೆ, ಪುರುಷೋತ್ತಮ ಬೇಂಗತ್ತಮಲೆ, ಸಂಚಾಲಕರಾಗಿ ಗಣೇಶ್ ಮಾವಂಜಿ, ಸಹ ಸಂಚಾಲಕರಾಗಿ ಪ್ರಕಾಶ್ ಕಣೆಮರಡ್ಕ, ಸದಸ್ಯರಾಗಿ ಬಾಲಚಂದ್ರ ಬೈಲು, ಬಾಲಕೃಷ್ಣ ಪುತ್ಯ, ಸುಪ್ರೀತ್, ಶೈಲಜಾ,ಸುನೀತ,ಮಂಜುಳ, ಶಶಿಕಲಾ, ಜುಮಾನ, ಪುಷ್ಪಾವತಿ ಹಾಗೂ ಭವ್ಯಶ್ರೀ ಇವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿನುತಾ ಪಾತಿಕಲ್ಲು ಮುಂಬರುವ ದಿನಗಳಲ್ಲಿ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆಯ ಬಗ್ಗೆ ತಿಳಿಸಿ ಸರ್ವರ ಸಹಕಾರ ಬಯಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮಂಜುಳಾ ಅವರು ಸರಕಾರಿ ಶಾಲೆಯ ಸೀಮಿತ ಸೌಕರ್ಯಗಳು, ಅಧ್ಯಾಪಕರ ಕೊರತೆಗಳನ್ನು ವಿವರಿಸಿ ಹಿರಿಯ ವಿದ್ಯಾರ್ಥಿ ಸಂಘದ ಸಹಕಾರ ಕೋರಿದರು.
ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಸುರೇಶ್ ಕಣೆಮರಡ್ಕ ಸ್ವಾಗತಿಸಿದರು. ಸಂಧ್ಯಾ ಮಂಡೆಕೋಲು ವಂದಿಸಿದರು.