ಸುಬ್ರಹ್ಮಣ್ಯ ಆಗಸ್ಟ್ 16 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ನಡೆದ ಸಪ್ತಾಹಿಕ ಸಭೆಯಲ್ಲಿ ಜೇನು ಕೃಷಿಯ ಬಗ್ಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.
ಜೇನು ಕೃಷಿಯ ಬಗ್ಗೆ ಅಪಾರ ಮಾಹಿತಿ ಉಳ್ಳವರು ಹಾಗೂ ಜೇನು ಕೃಷಿ ತಜ್ಞರೂ ಆದ ಬಾಳುಗೋಡಿನ ಅಜಯ್ ಪೊಯ್ಯೆಮಜಲು ಅವರು ಜೇನು ಕೃಷಿಯ ಬಗ್ಗೆ ಅದರ ಮಹತ್ವ, ಕೃಷಿ ಮಾಡುವ ವಿಧಾನ, ಉಪಯೋಗಗಳು ಹಾಗೂ ಅದರ ಸಂರಕ್ಷಣೆ ಬಗ್ಗೆ ವಿವರವಾದ ಮಾಹಿತಿಗಳನ್ನು ನೀಡಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ ನಾಯರ್ ಸಭಾಧ್ಯಕ್ಷತೆ ವಹಿಸಿದ್ದರು. ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಕಾರ್ಯದರ್ಶಿ ಚಿದಾನಂದ ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಗಿರಿಧರ ಸ್ಕಂದ, ಗೋಪಾಲ ಎಣ್ಣೆಮಜಲು, ಭರತ್ ನಕ್ರಾಜೆ, ವೆಂಕಟೇಶ ಎಚ್ ಎಲ್, ರವಿ ಕಕ್ಕೆಪದವು, ಕೋಶಾಧಿಕಾರಿ ಜಯಪ್ರಕಾಶ್ ಹಾಗೂ ಸದಸ್ಯರುಗಳಾದ ಸುದರ್ಶನ ಶೆಟ್ಟಿ, ಗಿರೀಶ್, ನವೀನ ಉಪಸ್ಥಿತರಿದ್ದರು.
- Tuesday
- December 3rd, 2024