Ad Widget

ಕೊಲ್ಲಮೊಗ್ರು : ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಶ್ವಥ್ ಯಳದಾಳು ಹಾಗೂ ಸದಸ್ಯರುಗಳಾದ ಮಾಧವ ಚಾಂತಾಳ, ಪುಷ್ಪರಾಜ್ ಪಡ್ಪು, ಶ್ರೀಮತಿ ಶಿವಮ್ಮ ಕಟ್ಟ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ನಾಯ್ಕ್ ಗಡಿಕಲ್ಲು, ಲೀಲಾವತಿ ಶಿರೂರು, ವಸಂತ ಕೊರಂಬಟ, ನವ್ಯಾ ನಡುಗಲ್ಲು, ಮಮತಾ ಚಾರ್ಮತ, ಆಶಿಶ್ ಕಟ್ಟೆಮನೆ, ಸಂಜೀವಿನಿ ಸಂಘದ ವಿಮಲಾಕ್ಷಿ ಗೋಳ್ಯಾಡಿ, ಬಂಗ್ಲೆಗುಡ್ಡೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲ, ದೈಹಿಕ ಶಿಕ್ಷಣ ಶಿಕ್ಷಕರಾದ ಕಿಶೋರ್ ಕೊಂದಾಳ ಹಾಗೂ ಬಂಗ್ಲೆಗುಡ್ಡೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಪ್ಪ ನಾಯ್ಕ್.ಬಿ ಸ್ವಾಗತಿಸಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋಹನ್.ಕೆ ಕಡ್ತಲ್ ಕಜೆ ವಂದಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!