ಉಬರಡ್ಕ: ಉಬರಡ್ಕ ಗ್ರಾಮದ ಕಿಂಡಿ ಅಣೆಕಟ್ಟಿನಲ್ಲಿ ಕಳೆದ ಕೆಲವು ಸಮಯಗಳಿಂದ ಸುರಿಯುತ್ತಿದ್ದ ಮಳೆಗೆ ನೀರಿನಲ್ಲಿ ತೇಲಿಬಂದ ಮರದ ದಿಮ್ಮಿ, ಕಸ ತುಂಬಿ ನೀರಿನ ಹರಿವಿಕೆಗೆ ಸಮಸ್ಯೆಯಾಗುವುದನ್ನು ಮನಗಂಡು ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಪ್ರಶಂಸೆಗೆ ಪಾತ್ರರಾದರು.
ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಚರ್ಚಿಸಿದ ಸ್ಥಳೀಯ ಯುವಕರ ತಂಡ ಮುಂಜಾನೆಯಿಂದಲೇ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಉಬರಡ್ಕ ಗ್ರಾಮದ ಯುವಕರಾದ ಗಂಗಾಧರ ನಾಯರ್, ಪ್ರಕಾಶ್ ಶೆಟ್ಟಿ, ಜನಾರ್ಧನ ಪೂಜಾರಿ, ಚೇತನ್ ಅಮೈ, ರಮೇಶ್ ಕಕ್ಕೆಬೆಟ್ಟು, ಸಂದೀಪ್ , ಪುನೀತ್ ಪೈಕ, ಆಕಾಶ್ ಮದಕ ಅಲ್ಲದೆ , ನಿವೃತ್ತ ಮಾಜಿ ಸೈನಿಕ ಮಾಧವ ಮದಕ ಕೂಡ ತುಂಬಿ ಹರಿಯುವ ನೀರಿಗೆ ಇಳಿದು ಮರದ ದಿಮ್ಮಿಗಳನ್ನು ಸರಿಸುವ ಕೆಲಸಕ್ಕೆ ಸಹಕರಿಸಿದ್ದು ಇವರ ಈ ಕಾರ್ಯವು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.