Ad Widget

ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಂದ ಧ್ವಜಸ್ತಂಭ ಕೊಡುಗೆ

. . . . . . . . .

ಸುಬ್ರಹ್ಮಣ್ಯ ಆಗಸ್ಟ್ 15: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಮೈಲಪ್ಪ ಸಂಕೇಶ್ ರವರು ಅಮರ ಮುಡ್ನೂರು ಗ್ರಾಮದ ಕುಂಟಿಕಾನ ಅಂಗನವಾಡಿಗೆ ಧ್ವಜ ಸ್ಥಂಭವನ್ನು ಕೊಡುಗೆಯಾಗಿ ನೀಡಿದರು.

. . . . . . .


ತದನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ಚಂದ್ರಶೇಖರ ನಾಯರ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಜಿಲ್ಲೆ 31 81 ವಲಯ 05ರ ಅಸಿಸ್ಟೆಂಟ್ ಗವರ್ನರ್ ವಿನಯ್ ಕುಮಾರ್ ನೆರವೇರಿಸಿದರು .ವೇದಿಕೆಯಲ್ಲಿ ರೋಟರಿ ವಲಯ 5ರ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ಅಂಗನಾಡಿ ವಲಯ ಮೇಲ್ವಿಚಾರಕಿ ವಿಜಯ, ಅಂಗನವಾಡಿ ಕಾರ್ಯಕರ್ತೆ ಜಯಂತಿ ಎಸ್, ಅಮರ ಮೂಡ್ನೂರು ಪಂಚಾಯತ್ ಸದಸ್ಯ ತೇಜಾವತಿ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಚಂದ್ರಾವತಿ ಸುಬ್ರಹ್ಮಣ್ಯ, ರೋಟೋರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳಾದ ಸೀತಾರಾಮ ಎಣ್ಣೆಮಜಲು, ಗೋಪಾಲ ಎಣ್ಣೆಮಜಲು, ರವಿ ಕಕ್ಕೆಪದವು, ಬೆಳ್ಳಾರೆ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷ ನವೀನ್ ತಂಬಿನಡ್ಕ, ಸ್ಥಳೀಯರಾದ ಮಹೇಶ್ ಮೆರ್ಕಜ, ಸಂತೋಷ್ ಮಡಪ್ಪಾಡಿ ಹಾಗೂ ಅಂಗನವಾಡಿ ಸಹಾಯಕಿ, ಪೋಷಕರು, ಊರಿನವರು ಹಾಜರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading