(ವರದಿ : ಉಲ್ಲಾಸ್ ಕಜ್ಜೋಡಿ)
ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿಯಿಂದ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಕಡೆಗೆ ಹೋಗುವ ರಸ್ತೆಯಲ್ಲಿ ಈ ಹಿಂದೆ ಮೂರು ಬಾರಿ ಲ್ಯಾಂಡ್ ಡೆಡ್ ಲೈನ್ ಕೇಬಲ್ ಅನ್ನು ಕಳವುಗೈದ ಘಟನೆ ನಡೆದಿದ್ದು, ಇದೀಗ ಮತ್ತೆ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಬಿ.ಎಸ್.ಎನ್.ಎಲ್ ಟವರ್ ಹತ್ತಿರ ಲ್ಯಾಂಡ್ ಡೆಡ್ ಲೈನ್ ಕೇಬಲ್ ಅನ್ನು ಮತ್ತೆ ಕಳವುಗೈಯ್ಯಲು ಯತ್ನಿಸಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಸ್ಥಳೀಯರಾದ ಜಯಪ್ರಕಾಶ್ ಕಜ್ಜೋಡಿ ಅಮರ ಸುದ್ದಿಗೆ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಮೂರು ಬಾರಿ ಕೇಬಲ್ ಕಳವುಗೈಯ್ಯಲಾಗಿದ್ದು, ಇದೀಗ ನಾಲ್ಕನೇ ಬಾರಿಗೆ ಕಳವುಗೈಯ್ಯುವ ಯತ್ನ ನಡೆದಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಾಗಿದೆ.