Ad Widget

ಸುಳ್ಯ : ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದ ವತಿಯಿಂದ ಪಂಜಿನ ಮೆರವಣಿಗೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ಇದರ ಸುಳ್ಯ ನಗರ ವತಿಯಿಂದ ಪಂಜಿನ ಮೆರವಣಿಗೆಯು ಸುಳ್ಯ ನಗರದಲ್ಲಿ ದೊಂದಿಯ ಮೆರವಣಿಗೆಯೊಂದಿಗೆ ನಡೆಯಿತು.

. . . . .

1947 ಆಗಸ್ಟ್ 14ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲಟ್ಟ ಆ ಕರಾಳ ದುರಂತವನ್ನು ನೆನಪಿಸುತ್ತಾ , ಭ್ರಷ್ಟಚಾರ , ಕೋಮವಾದ ಸೇರಿದಂತೆ ಇತರೆ ವಿಚಾರಗಳನ್ನು ಮುಂದಿಟ್ಟುಕೊಂಡು ಬೃಹತ್ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮಶೇಖರ ಪೈಕ ವಹಿಸಿದ್ದರು. ಪ್ರದೀಪ್ ಸರಿಪಳ್ಳ ದಿಕ್ಸೂಚಿ ಮಾತುಗಳನ್ನಾಡುತ್ತಾ ಸ್ವಾತಂತ್ರ್ಯವು ರಕ್ತದಿಂದ ಬಂದಿದೆ ಅಲ್ಲದೇ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು. ಭಾರತ ಅಂದರೆ ಜ್ಞಾನದಿಂದ ಬಂದಿರುವ ಹೆಸರು ಬಾಂಗ್ಲಾದಲ್ಲೂ ಹಿಂದು ಅನ್ನುವ ಒಂದೇ ಒಂದು ಕಾರಣಕ್ಕೆ ಅಲ್ಲಿ ಹಿಂಸೆ ನಡೆಯುತ್ತಿದೆ ಎಂದು ಹೇಳಿದರು. ನಿವೃತ್ತ ಯೋಧ ಎನ್ ಬಿ. ಬಾಲಕೃಷ್ಣ ಮಾತನಾಡಿ ಕೆಲಸದಲ್ಲಿ ಧ್ಯೇಯ ಬದ್ಧತೆ ಇರಬೇಕು, ಬಡವರಿಗೆ ತೊಂದರೆ ಪಡಿಸಿಕೊಂಡು ಹೋಗಬಾರದು.‌ ಅಲ್ಲದೇ ಯುವ ಜನತೆ ಸೇನೆಗೆ ಮನೆಯಿಂದ ಒಬ್ಬರಂತೆ ತೆರಳಬೇಕು ಎಂದು ಹೇಳಿದರು. ಸಭಾ ವೇದಿಕೆಯಲ್ಲಿ ಉಪೇಂದ್ರ ಕಾಮತ್ , ರೂಪೇಶ್ ಪೂಜಾರಿಮನೆ , ವರ್ಷಿತ್ ಚೊಕ್ಕಾಡಿ , ಹರಿಪ್ರಸಾದ್ ಎಲಿಮಲೆ ಉಪಸ್ಥಿತರಿದ್ದರು. ನವೀನ್ ಎಲಿಮಲೆ ಅಖಂಡ ಭಾರತ ಸಂಕಲ್ಪ ವಿಧಿ ಬೋಧಿಸಿದರು.

ಪಂಜಿನ ಮೆರವಣಿಗೆಯಲ್ಲಿ ಕಾರ್ಯಕ್ರಮದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಪ್ರಮುಖರಾದ ಸುಬೋದ್ ಶೆಟ್ಟಿ ಮೇನಾಲ , ವಿನಯ ಕುಮಾರ್ ಕಂದಡ್ಕ, ಸುನಿಲ್ ಕೇರ್ಪಳ್ಳ ,ನವೀನ್ ಎಲಿಮಲೆ , ರಜತ್ ಅಡ್ಕಾರ್ , ಬೂಡು ರಾಧಾಕೃಷ್ಣ ರೈ , ಮಹೇಶ್ ಕುಮಾರ್ ರೈ, ಪುಸ್ಪ ಮೇದಪ್ಪ , ಶಶಿಕಲಾ ದುಗಲಡ್ಕ, ಶಿಲ್ಪ‌ಸುದೇವ್ , ಅಶೋಕ್ ಅಡ್ಕಾರ್ , ಪ್ರಸಾದ್ ಕಾಟೂರು ಮತ್ತಿತರರು ಉಸ್ಥಿತರಿದ್ದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!