
ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಆಗಸ್ಟ್ ೧೫ರಂದು ಅಪರಾಹ್ನ ಸುಳ್ಯ ನಗರದಲ್ಲಿ ಸುಳ್ಯ ನಗರದ ಮತ್ತು ತಾಲೂಕಿನ ಎಲ್ಲ ಸಂಘ ಸಂಸ್ಥೆಗಳ ಸಹಭಾಗಿತ್ವ ದೊಂದಿಗೆ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಧಾನ ಸಂಚಾಲಕ ಹರೀಶ್ ಬಂಟ್ವಾಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಸ್ಟಿಯಲ್ಲಿ ಮತನಾಡುತ್ತಾ ಈ ಬಾರಿ ಆಗಸ್ಟ್ ೧೫ರಂದು ಸುಳ್ಯ ನಗರದ ಎಲ್ಲ ವಾರ್ಡ್ ಗಳ ಜನರನ್ನು ಸೇರಿಸಿಕೊಂಡು ಮಾಡಬೇಕೆಂಬ ಆಲೋಚಿಸಿ ಈ ರೀತಿಯಲ್ಲಿ ತೀರ್ಮಾನಿಸಲಾಗಿದ್ದು ಈ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ , ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ , ಡಾ. ಕೆ ವಿ ಚಿದಾನಂದ , ಡಾ ಯು ಪಿ ಶಿವಾನಂದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸ್ವಾತಂತ್ರ್ಯ ನಡಿಗೆಯು
ವಿಷ್ಣು ಸರ್ಕಲ್, ಜ್ಯೋತಿ ಸರ್ಕಲ್ ಮತ್ತು ಚೆನ್ನಕೇಶವ ದೇವಸ್ಥಾನದ ಬಳಿಯಿಂದ 3 ತಂಡಗಳಾಗಿ ಹೊರಟು ಬಸ್ ನಿಲ್ದಾಣದಲ್ಲಿ ಸೇರುವುದು, ಬಳಿಕ ಸ್ವಾತಂತ್ರ್ಯ ಗೀತೆ ಗಾಯನ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದಿನೇಶ್ ಮಡಪ್ಪಾಡಿ , ಶಂಕರ್ ಪೆರಾಜೆ , ಶರೀಫ್ ಕಂಠಿ ಉಪಸ್ಥಿತರಿದ್ದರು.
