ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್ ಕುರಿತ ಮಾಹಿತಿ ಇಲ್ಲಿದೆ
ಸಂಪಾಜೆ : ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯ ಪಕ್ಕದಲ್ಲಿಯೇ ಹೊಳೆಯು ಹರಿಯುತ್ತಿದ್ದು ಕೆಲ ವರ್ಷಗಳ ಹಿಂದೆ ಹೊಳೆಯ ನೀರು ನುಗ್ಗಿ ಭಾರಿ ಅವಾಂತರವೇ ಸೃಷ್ಟಿಯಾಗಿತ್ತು. ಇದಾದ ಬಳಿಕ ಸಂಘಟನ ಚತುರ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಜಿ ಕೆ ಹಮೀದ್ ನೇತೃತ್ವದಲ್ಲಿ ಸಮರ್ಥವಾದ ವಿಪತ್ತು ನಿರ್ವಹಣಾ ಸಮಿತಿಗಳು ಮತ್ತು ಊರಿನ ಜನರನ್ನು ಒಂದು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕವನ್ನು ಸಾಧಿಸಿಕೊಂಡು ಕೇವಲ ಊರಿನ ಸಮಸ್ಯೆಗಳು ಮತ್ತು ನೆರೆಯ ಗ್ರಾಮಗಳು ಸೇರಿದಂತೆ ಅವಶ್ಯಕವಾದ ಮಾಹಿತಿಗಳನ್ನು ಪ್ರತಿಯೊಬ್ಬರಿಗೂ ಹಂಚುವ ಮೂಲಕ ಮಾದರಿಯಾಗಿಸಿಕೊಂಡು ಬರುತ್ತಿದೆ. ಅಲ್ಲದೇ ಎಲ್ಲಾ ರೀತಿಯ ಸಮಸ್ಯೆಗಳು ಮತ್ತು ಉಪಯುಕ್ತ ಮಾಹಿತಿಗಳನ್ನು ಗ್ರಾಮದ ಜನತೆಗೆ ನೀಡುವ ಸಲುವಾಗಿ ರಚಿಸಲಾಗಿದೆ. ಅದೇ ಮಾದರಿಯಲ್ಲಿ ಇಂದು ಹಠತ್ತಾಗಿ ಮಳೆ ಸುರಿಯುತ್ತಿರುವುದನ್ನು ಗಮನಿಸಿ ತಕ್ಷಣವೇ ಅಲ್ಲಿನ ಪ್ರತಿಯೊಬ್ಬರು ತನ್ನ ಕರ್ತವ್ಯವೆಂದು ಭಾವಿಸಿ ರಕ್ಷಣಾ ಕಾರ್ಯಕ್ಕೆ ಸಿದ್ದರಾಗಿ ಬಂದರು. ಬಳಿಕ ಮಳೆಯ ಪ್ರಮಾಣ ಕಡಿಮೆಯಾಗಿ ನೀರು ತಗ್ಗ ತೊಡಗಿತು. ಈ ಸಂದರ್ಭದಲ್ಲಿ ಗ್ರಾಮದ ನಾನಾ ಭಾಗಗಳ ಮಾಹಿತಿಯನ್ನು ಕೂಡ ಇದೇ ಗುಂಪಿನಲ್ಲಿ ಸಂಗ್ರಹಿಸುತ್ತಿದ್ದು ಗ್ರಾಮ ಆಡಳಿತಾಧಿಕಾರಿಗಳು , ಅಭಿವೃದ್ಧಿ ಅಧಿಕಾರಿಗಳು , ಕಂದಾಯ ಇಲಾಖಾ ಅಧಿಕಾರಿಗಳು , ಆಶಾ ಕಾರ್ಯಕರ್ತೆಯರು , ಆರೋಗ್ಯ ಕಾರ್ಯಕರ್ತೆಯರು , ಪೋಲಿಸ್ , ಮೆಸ್ಕಾಂ , ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಪಂಚಾಯತ್ ಅಧ್ಯಕ್ಷರು , ಉಪಾಧ್ಯಕ್ಷರು, ಸದಸ್ಯರು ಎಲ್ಲರೂ ಇದೇ ವ್ಯಾಟ್ಸಾಪ್ ಗುಂಪಿನ ಮೂಲಕವೇ ಸಮಸ್ಯೆಗಳನ್ನು ತಿಳಿಸಿ ಇತ್ಯರ್ಥ ಪಡಿಸಿಕೊಳ್ಳುತ್ತಿದ್ದು ತಡರಾತ್ರಿಯು ಅಧಿಕಾರಿಗಳು ಸಮಸ್ಯೆಗಳ ಸಂದರ್ಭದಲ್ಲಿ ಕರೆಮಾಡಿ ವಿಚಾರಿಸುತ್ತಿದ್ದು ಇದೀಗ ಗಾಂಧಿ ಗ್ರಾಮ ಪುರಸ್ಕೃತ ಸಂಪಾಜೆ ಪಂಚಾಯತ್ ತಾಲೂಕಿನ ಇತರೆ ಗ್ರಾಮಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ.