Ad Widget

ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಮಾನವ ಸರಪಳಿ

ಸುಳ್ಯದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಗರದ ಪ್ರಮುಖ ರಸ್ತೆಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ಆಕ್ರಮಣ ಅತ್ಯಚಾರ ದೌರ್ಜನ್ಯವನ್ನು ಖಂಡಿಸಿ ಹಿಂದೂ ಬಾಂಧವರು ಸುಳ್ಯ ನಗರದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಜ್ಯೋತಿ ವೃತ್ತದ ಬಳಿಯಿಂದ ಮಾನವ ಸರಪಳಿ ರಚಿಸಿ ಪ್ಲೇ ಆಫ್ ಕಾರ್ಡ್ ಪ್ರದರ್ಶನ ಮಾಡುವ ಮೂಲಕ ವಿವಿಧ ಹಿಂದೂ ಸಂಘಟನೆಯ ಮುಖಂಡರು ಪಾಲ್ಗೊಂಡರು.

ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಬಳಿಯಲ್ಲಿ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಹಿಂದೂ ಮುಖಂಡ ಮುರಳೀಕೃಷ್ಣ ಹಸಂತಡ್ಕ, ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಮಹೇಶ್ ರೈ ಮೇನಾಲ, ಭಾರತಿ ಉಳುವಾರು, ಶಶಿಕಲಾ ನೀರಬಿದಿರೆ, ಪೂಜಿತಾ ಕೇರ್ಪಳ, ಗುಣವತಿ ಕೊಲ್ಲಂತಡ್ಕ, ಸುಶೀಲಾ ಕಲ್ಲುಮುಟ್ಟು, ಕಿಶೋರಿ ಶೇಟ್‌, ಸೋಮಶೇಖರ ಪೈಕ, ದೀಪಕ್ ಕುತ್ತಮೊಟ್ಟೆ, ಬೂಡು ರಾಧಾಕೃಷ್ಣ ರೈ, ಜಯರಾಮ ರೈ ಜಾಲ್ಲೂರು, ವರ್ಷಿತ್ ಚೊಕ್ಕಾಡಿ, ಲತೀಶ್ ಗುಂಡ್ಯ, ಹರೀಶ್ ಬೂಡುಪನ್ನೆ, ವಿಕ್ರಂ ಎ ವಿ , ಸೋಮನಾಥ ಪೂಜಾರಿ, ದೇವರಾಜ್ ಆಳ್ವ, ಶ್ರೀಕಾಂತ್ ಮಾವಿನಕಟ್ಟೆ , ಜಗನ್ನಾಥ್ ಜಯನಗರ , ಲೋಕೇಶ್ ಕೆರೆಮೂಲೆ ಸೇರಿದಂತೆ ಪ್ರಮುಖರು ಬಾಂಗ್ಲಾದ ಮುಸ್ಲಿಂ ಸಮುದಾಯದ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.

ಬಾಂಗ್ಲಾದ ಹಿಂದೂಗಳೊಂದಿಗೆ ನಾವಿದ್ದೇವೆ ಎಂಬ ಘೋಷಣೆಯನ್ನು ಕೂಗಿದರು. ಈ ನೂರಾರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!