ನಾಲ್ಕೂರು ಗ್ರಾಮದ ನಡುಗಲ್ಲು ಬಿಜೆಪಿ 119ನೇ ಬೂತ್ ನ ನೂತನ ಬೂತ್ ಸಮಿತಿ ರಚನಾ ಸಭೆಯು ಆ.09 ರಂದು ರವೀಂದ್ರ ಕೊರಂಬಟ ಅವರ ಮನೆಯಲ್ಲಿ ನಡೆಯಿತು.
ನೂತನ ಬೂತ್ ಸಮಿತಿಯ ಅಧ್ಯಕ್ಷರಾಗಿ ಆತ್ಮರಾಮ ವಲ್ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಎರ್ಧಡ್ಕ, 3ಬಿ.ಎಲ್. ಏ 2 ಆಗಿ ಹರಿಶ್ಚಂದ್ರ ಕುಳ್ಳಂಪಾಡಿ, ಬೂತ್ ಏಜೆಂಟ್ ಆಗಿ ಹರೀಶ್ ನಾಯ್ಕ್ ಅಂಜೇರಿ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಶಕ್ತಿಕೇಂದ್ರದ ಪ್ರಮುಖರಾದ ವಿಜಯ ಕುಮಾರ್ ಚಾರ್ಮತ, ಚಂದ್ರಶೇಖರ ಬಾಳುಗೋಡು, ಪಂಚಾಯತ್ ಸದಸ್ಯರಾದ ಹರೀಶ್ ಕೊಯಿಲ, ಪ್ರಮೀಳಾ ಎರ್ದಡ್ಕ, ಲೀಲಾವತಿ ಅಂಜೇರಿ ಮತ್ತು ಹಿಂದಿನ ಬೂತ್ ಸಮಿತಿಯ ಅಧ್ಯಕ್ಷರಾದ ನಿಶಿತ್ ಮೂರ್ಜೆ, ಕಾರ್ಯದರ್ಶಿ ಮೇಘನ್ ಕಲ್ಲಾಜೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
- Wednesday
- December 4th, 2024