ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಘಟಕ ಮತ್ತು ಪರಿಕ್ಷಾ ಸ್ಪೂರ್ತಿ ಪೌಂಡೇಶನ್ ಇವರು ನೀಡುವ ರಾಜ್ಯ ಮಟ್ಟದ
ಶಿಕ್ಷಕ ಸಾಧಕ ರತ್ನ ಪ್ರಶಸ್ತಿಯು ಕೆ.ವಿ.ಜಿ ಇಂಟರ್ ನ್ಯಾಷನಲ್ಪ ಬ್ಲಿಕ್ ಸ್ಕೂಲ್‌ನ ಶಿಕ್ಷಕಿ ಶ್ರೀಮತಿ ಭವ್ಯ ಅಟ್ಲೂರು ರವರಿಗೆ ದೊರೆತಿದೆ. ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳನ್ನು ಪರಿಪೂರ್ಣ ರೀತಿಯಲ್ಲಿ ತಯಾರು ಮಾಡಿ ಅವರಲ್ಲಿ ಶೇ 100% ಫಲಿತಾಂಶ ಪಡೆಯುವಲ್ಲಿ ಕನ್ನಡ ಭಾಷೆಯನ್ನು ಭೋದಿಸಿದ ಪ್ರಯತ್ನಕ್ಕೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಕಳೆದ ಸುಮಾರು 8 ವರ್ಷಗಳಿಂದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್
ಸ್ಕೂಲ್‌ನಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಅತ್ತುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಸ್ಫರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶ್ತಿಗಳನ್ನು ಪಡೆದಿರುತ್ತಾರೆ. ಇವರು ಕೆ.ವಿ.ಜಿ.ಪಾಲಿಟೆಕ್ನಿಕ್ ಸಿವಿಲ್ವಿ ಭಾಗದ ಉದ್ಯೋಗಿ ದಯಾನಂದ ಅಟ್ಲೂರುರವರ ಪತ್ನಿ. ಇವರ ಈ ಸಾಧನೆಗೆ ಅಕಾಡೆಮಿ ಆಫ್ ಲಿಬರಲ್ಎ ಜ್ಯುಕೇಶನ್(ರಿ)ಕಮಿಟಿ “ಬಿ” ಇದರ ಅಧ್ಯಕ್ಷರಾದ ಡಾ.ರೇಣುಕಾ ಪ್ರಸಾದ್ ಕೆ.ವಿ, ಕಾರ್ಯದರ್ಶಿಗಳಾದ ಶ್ರೀಮತಿ ಡಾ|ಜ್ಯೋತಿ ಆರ್ಪ್ರ ಸಾದ್, ನಿರ್ದೇಶಕರಾದ ಶ್ರೀಮತಿ ಡಾ|ಅಭಿಜ್ಞಾ ಕೆ.ಆರ್ ಮತ್ತು ಮೌರ್ಯ ಆರ್ ಕುರುಂಜಿ ಹಾಗೂ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ಸ್ಕೂಲ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ. ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಅರುಣ್ಕು ಮಾರ್ ಅಭಿನಂದಿಸಿರುತ್ತಾರೆ.
- Wednesday
- December 4th, 2024