ಕಮಿಲ ಬಳ್ಪ ರಸ್ತೆಯಲ್ಲಿ ಬಾಂಧವ್ಯ ಗೆಳೆಯರ ಬಳಗದ ವತಿಯಿಂದ ನಾಮಫಲಕ ಮತ್ತು ಸಿಸಿ ಕ್ಯಾಮೆರಾ ಅಳವಡಿಕೆ ಮತ್ತು ಶುಚಿತ್ವ ಕಾರ್ಯಕ್ರಮ ನಡೆಯಿತು. ಈ ರಸ್ತೆಯಲ್ಲಿ ಕಸ,ತ್ಯಾಜ್ಯ ಎಸೆಯುವುದು, ಹಾವುಗಳನ್ನು ಹಾಗೂ ಸಾಕು ಪ್ರಾಣಿಗಳನ್ನು ತಂದು ಬಿಡುತ್ತಿದ್ದು ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ರಸ್ತೆಯಲ್ಲಿ ನಡೆದಾಡುವ ಮಕ್ಕಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದನ್ನು ತಡೆಯಲು ಸೂಚನಾ ಫಲಕ ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿದೆ. ಇನ್ನಾದರೂ ಅನಾಗರಿಕರಂತೆ ವರ್ತಿಸುವ ಜನ ಎಚ್ಚೆತ್ತುಕೊಳ್ಳುವುದು ಒಳಿತು.
- Wednesday
- December 4th, 2024