ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ (ರಿ.)ದೇವ ಒಕ್ಕೂಟ ಮತ್ತು ಗೆಳೆಯರ ಬಳಗ (ರಿ.) ದೇವ ಇವುಗಳ ಸಂಯಕ್ತ ಆಶ್ರಮದಲ್ಲಿ ಆ.8 ರಂದು
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವ ಇಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು.
ಸ್ವಚ್ಛತಾಕಾರ್ಯಕ್ರಮಕ್ಕೆ ಗ್ರಾಮಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಗೆಳೆಯರ ಬಳಗ ಸದಸ್ಯರು ಕಳೆ ಕೊಯ್ಯುವ ಯಂತ್ರಗಳನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ದೇವ ಒಕ್ಕೂಟದ ಅಧ್ಯಕ್ಷರಾದ ಯೋಗಿಶ್ ದೇವ, ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ, ಹಾಗೂ ಗ್ರಾಮಾಬಿವೃದ್ಧಿ ಯೋಜನೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
- Wednesday
- December 4th, 2024