ಬಿಜೆಪಿ ಸುಳ್ಯ ಮಂಡಲದ ಅರಂತೋಡು ಶಕ್ತಿಕೇಂದ್ರದ ಬೂತ್ ಸಂಖ್ಯೆ 219 ಅಡ್ತಲೆ ಬೂತ್ ನ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಯು ವಿಶ್ವನಾಥ ಅಡ್ತಲೆಯವರ ಮನೆಯಲ್ಲಿ ನಡೆಯಿತು.
ಬೂತ್ ಅಧ್ಯಕ್ಷ ಲೋಹಿತ್ ಮೇಲಡ್ತಲೆ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪಕ್ಷದ ಸಂಘಟನಾತ್ಮಕ ಚುನಾವಣೆ ಪ್ರಕ್ರಿಯೆಯಂತೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಬೂತ್ ಅಧ್ಯಕ್ಷರಾಗಿ ಶ್ರೀಮತಿ ಕವಿತಾ ಅಡ್ತಲೆ ಕಾರ್ಯದರ್ಶಿಯಾಗಿ ಓಂಪ್ರಸಾದ್ ಪಿಂಡಿಮನೆ. ಮತಗಟ್ಟೆ ಏಜೆಂಟ್ ಆಗಿ ಗೋಪಾಲಕೃಷ್ಣ ಪಿಂಡಿಮನೆ, ಬಿ. ಎಲ್. ಎ 2.ಆಗಿ ಶಶಿಕುಮಾರ್ ಉಳುವಾರು ಅಡ್ತಲೆ ಆಯ್ಕೆಯಾದರು.
ಸದಸ್ಯರಾಗಿ ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಕುl ಶ್ವೇತಾ ಅರಮನೆಗಯ, ದಿನೇಶ್ ಅರಮನೆಗಯ, ತೀರ್ಥಕರ ಆಡ್ತಲೆ, ಚಂದ್ರಶೇಖರ ಚೋಡಿಪಣೆ, ಶ್ರೀಧರ ನಾರ್ಕೋಡು, ಅಶೋಕ್ ಪಾನತ್ತಿಲ, ಶ್ರೀಮತಿ ಸೌಮ್ಯ ಮೇಲಡ್ತಲೆ, ಆಯ್ಕೆಯಾದರು. ಸಭೆಯಲ್ಲಿ ನಿಕಟಪೂರ್ವ ಕಾರ್ಯದರ್ಶಿ ಮೋಹನ್ ಅಡ್ತಲೆ, ಗಿರಿಪ್ರಕಾಶ್ ಕಲ್ಲುಗದ್ದೆ, ವಿನಯಚಂದ್ರ ಆಡ್ತಲೆ, ಶಿವರಾಮ ಪಿಂಡಿಮನೆ, ಸಂತೋಷ ಪಿಂಡಿಮನೆ, ತಿಲನ್ ಕಲ್ಲುಗದ್ದೆ, ವಿಶ್ವನಾಥ ಅಡ್ತಲೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆಯವರ ಉಪಸ್ಥಿತಿಯಲ್ಲಿ ನೂತನ ಬೂತ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.