ಮಂಡೆಕೋಲು ಗ್ರಾಮದ ಪೇರಾಲಿನ ಹರ್ಷಿತ್ ರವರಿಗೆ ಹಠಾತ್ ಬ್ರೈನ್ ಹ್ಯಾಮರೇಜ್ ಮೆದುಳಿನ ರಕ್ತ ಸ್ರಾವ ಉಂಟಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯ ವೆಚ್ಚ ಸುಮಾರು ರೂ 7.50 ಲಕ್ಷದಷ್ಟು ತಗಲಬಹುದು ಎಂದು ವೈದ್ಯರು ತಿಳಿಸಿರುವ ಹಿನ್ನಲೆಯಲ್ಲಿ ಮನೆಯವರು ಆ ವೆಚ್ಚವನ್ನು ಭರಿಸಲು ಕಷ್ಟ ಸಾಧ್ಯವಾಗಿರುವುದೆಂದು ತಿಳಿಸಿರುವುದರಿಂದ ಸಮಾಜದ ಎಲ್ಲಾ ಬಂಧುಗಳು ತಮ್ಮ ಕೈಯಿಂದ ಸಾಧ್ಯವಾದಷ್ಟು ನಿಧಿ ಸಂಗ್ರಹ ಮಾಡಿ ಕೊಟ್ಟಿರುತ್ತಾರೆ. ಸೇವಾ ಜಾಗರಣ ಪ್ರಮುಖರಾದ ಲಕ್ಷ್ಮಣ ಉಗ್ರಾಣಿಮನೆ ನೇತೃತ್ವದಲ್ಲಿ ಜಾಗರಣ ಕಾರ್ಯಕರ್ತರು ಹತ್ತು ಸಾವಿರದಷ್ಟು ಸೇವಾ ನಿಧಿ ಸಂಗ್ರಹ ಮಾಡಿ ಹರ್ಷಿತ್ ರವರ ಮನೆಗೆ ತೆರಳಿ ಹಸ್ತಾಂತರಿಸಿದರು.
- Tuesday
- December 3rd, 2024