Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಆಟಿ ಕೂಟ – ಕುಟುಂಬ ಮಿಲನ

ಸುಳ್ಯ ಪಯಸ್ವಿನಿ ಜೇಸಿಐ ಆಟಿ ಕೂಟ, ಜೇಸಿ ವಲಯದ ಉಪಾಧ್ಯಕ್ಷರ ಅಧಿಕೃತ ಭೇಟಿ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ಆ.08 ರಂದು ಸಂಜೆ ಸುಳ್ಯದ ಜೇಸಿ ಭವನ ದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸದಸ್ಯರು ತಮ್ಮ ತಮ್ಮ ಮನೆಯಿಂದ ಸುಮಾರು 25ಕ್ಕೂ ಮಿಕ್ಕಿ ವಿಶಿಷ್ಟ ವಾದ ಆಟಿ ಯ ಖಾದ್ಯಗಳನ್ನು ತಯಾರಿಸಿ ತಂದಿದ್ದರು. ಆಟಿಯ ಮಹತ್ವ.  ಮತ್ತು ಆಚರಣೆಯ ಕುರಿತು ಶಶ್ಮಿ ಭಟ್ ಅಜ್ಜಾವರ  ಮಾಹಿತಿ ನೀಡಿದರು.  ವೇದಿಕೆಯಲ್ಲಿ   ವಲಯ ಉಪಾಧ್ಯಕ್ಷ ಅಭಿಷೇಕ್ ಜಿ.ಎಂ., ನಿಕಟಪೂರ್ವಅಧ್ಯಕ್ಷರಾದ ನವೀನ್ ಕುಮಾರ್ ಅಜ್ಜಾವರ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಸೀನಿಯರ್ ಚೆಂಬರ್ ಸುಳ್ಯ ಇದರ ಕಾರ್ಯದರ್ಶಿ ಮೋಹನ್ ಎ.ಕೆ. ಭಾಗವಹಿಸಿ ಶುಭಕೋರಿದರು.  ಜೇಸಿಐ ವಲಯ 15 ರ ಪೂರ್ವದ್ಯಕ್ಷರು, ವಲಯ ಪೂರ್ವ  ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಕುಟುಂಬ ಮಿಲನ ಕಾರ್ಯಕ್ರಮದಲ್ಲಿ  ಹುಟ್ಟುಹಬ್ಬ ಆಚರಿಸಿದ ಸದಸ್ಯರಿಗೆ ಹೂವಿನ ಗಿಡವನ್ನು ನೀಡುವ ಮೂಲಕ ಶುಭಾಶಯ ಕೋರಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!