ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ
ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , ಯೋಗಮುದ್ರಾಸನ ದಲ್ಲಿ 41 ನಿಮಿಷ 02 ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ. ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.
ಮತ್ತು 04 ಅಗಸ್ಟ್ 2024 ಆದಿತ್ಯವಾರ ದಂದು ಮೈಸೂರು ನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ 11 ರಿಂದ 14 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ನಿಹಾನಿ ವಾಲ್ತಾಜೆ 06 ಸ್ಥಾನಗಳಿಸಿರುತ್ತಾರೆ.
ಇವರು ವಾಲ್ತಾಜೆ ಶ್ರೀ ಪ್ರಶಾಂತ್ ವಾಲ್ತಾಜೆ ಮತ್ತು ಶ್ರೀಮತಿ ಚೈತ್ರ ರವರ ಪುತ್ರಿ. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ
ಅಮರ ಯೋಗ ತರಬೇತಿ ಕೇಂದ್ರ ದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್ ನ 5ನೇ ತರಗತಿ ವಿದ್ಯಾರ್ಥಿನಿ.
- Saturday
- November 23rd, 2024