
ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರಕಾರ 5ನೇ ಕರಡು ಅಧಿಸೂಚನೆ ಪ್ರಕಟಿಸಿರುವುದನ್ನು ವಿರೋಧಿಸಿ ಆ. 08 ರಂದು ಗುರುವಾರ ಬೆಳಿಗ್ಗೆ ಗಂಟೆ 10:30ಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಪಂಚಾಯತಿನ ಬಳಿ ತುರ್ತು ಸಭೆ ಕರೆಯಲಾಗಿದೆ. ಪಶ್ಚಿಮ ಘಟ್ಟ ಸೂಕ್ಷ್ಮವಲಯ ಘೋಷಣೆಯ ಮತ್ತು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಹೋರಾಟದ ರೂಪುರೇಷೆಗಳನ್ನು ಶೀಘ್ರ ತಯಾರಿ ಮಾಡಬೇಕಿದೆ. ಆದುದರಿಂದ ಸಭೆಗೆ ಪಕ್ಷ, ಜಾತಿ ಭೇದ ಮರೆತು ರೈತರ ಉಳಿವಿಗಾಗಿ ಬದುಕಿನ ಉಳಿವಿಗಾಗಿ ಈ ಸಭೆಯಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ಮಲೆನಾಡು ಜನಹಿತ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.