Ad Widget

ಸುಳ್ಯ ವಕೀಲರ ಸಂಘಕ್ಕೆ ಸುಕುಮಾರ ಕೋಡ್ತುಗುಳಿ ಅಧ್ಯಕ್ಷ ಉಪಾಧ್ಯಕ್ಷತೆಗೆ ಚುನಾವಣೆ: ದಿಲೀಪ್ ಬಾಬ್ಲು ಬೆಟ್ಟು ಭರ್ಜರಿ ಗೆಲುವು

ಜಗದೀಶ್ ಡಿ.ಪಿ‌


ಸುಳ್ಯ ವಕೀಲರ ಸಂಘದ ಮುಂದಿನ ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಸುಕುಮಾರ್ ಕೋಡ್ತುಗುಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ದಿಲೀಪ್ ಬಾಬ್ಲುಬೆಟ್ಟು ಭರ್ಜರಿ ಗೆಲುವು ಪಡೆದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಡಿ.ಪಿ ಸಹ ಕಾರ್ಯದರ್ಶಿಯಾಗಿ ಅನಿತಾ ಆರ್. ನಾಯಕ್, ಕೋಶಾಧಿಕಾರಿಯಾಗಿ ಹರ್ಷಿತ್ ಕಾರ್ಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಮ ಕೆ. ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಕುಸುಮಾಧರ ಕೆ.ಎಸ್, ಗ್ರಾಂಥಾಲಯ ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷತೆ ಹೊರತು ಪಡಿಸಿ ಉಳಿದ ಎಲ್ಲಾ ಸ್ಥಾನಗಳಗೆ ಅಂತಿಮವಾಗಿ ಒಂದೊoದೇ ನಾಮಪತ್ರಗಳು ಇದ್ದುದ್ದರಿಂದ ಎಲ್ಲಾ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.

ಅಧ್ಯಕ್ಷತೆ ಎರಡು ನಾಮಪತ್ರ: ವಕೀಲರ ಸಂಘದ ಅಧ್ಯಕ್ಷತೆಗೆ ಹಿರಿಯ ವಕೀಲರಾದ ಸುಕುಮಾರ್ ಕೋಡ್ತಗುಳಿ ಹಾಗೂ ಭಾಸ್ಕರ್ ರಾವ್‌ರವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡಿಯಲು ಕೊನೆಯ ದಿನವಾದ ಜು.29ರಂದು ಭಾಸ್ಕರ್ ರಾವ್ ರವರು ನಾಮಪತ್ರ ಹಿಂಪಡೆದಿದ್ದರಿಂದ ಅಧ್ಯಕ್ಷರಾಗಿ ಸುಕುಮಾರ್ ಕೋಡ್ತಗುಳಿ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷತೆಗೆ ಚುನಾವಣೆ: ವಕೀಲರ ಸಂಘದಲ್ಲಿ ಇರುವ 1 ಉಪಾಧ್ಯಕ್ಷತೆಯ ಸ್ಥಾನಕ್ಕೆ 4 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದರು. ದಿಲೀಪ್ ಬಾಬ್ಲುಬೆಟ್ಟು, ಚರಣ್ ರಾಜ್ ಕಾಯರ, ಪುಷ್ಪರಾಜ ಗಾಂಭೀರ್ ಹಾಗೂ ಸುಬ್ಯಮಣ್ಯ ಭಟ್ ನಾಮಪತ್ರ ಸಲ್ಲಿಸಿದ್ದರು. ಜು.29ರಂದು ಚರಣ್ ಕಾಯರ ನಾಮಪತ್ರ ವಾಪಸ್ ಮಡೆದು ಮೂರು ಮಂದಿ ವಕೀಲರು ಕಣದಲ್ಲಿದ್ದುದರಿಂದ ಚುನಾವಣೆಗೆ ನಿರ್ಧರಿಸಲಾಯಿತು.
ಆ. 3ರಂದು ವಕೀಲರ ಸಂಘದ ಕಛೇರಿಯಲ್ಲಿ ಉಪಾಧ್ಯಕ್ಷತೆಗೆ ಬೆಳಗ್ಗಿನಿಂದ ಮಧ್ಯಾಹ್ನ 2 ಗಂಟೆ ತನಕ ಚುನಾವಣೆ ನಡೆಯಿತು. 103 ಮಂದಿ ಮತದಾರರಲ್ಲಿ 88 ಮಂದಿ ಮತ ಚಲಾಯಿಸಿದರು. ಮಧ್ಯಹ್ನ ಮೂರುಗಂಟೆಗೆ ಮತ ಎಣಿಕೆ ಆರಂಭಗೊಂಡಿತು. ಈ ಸಂದರ್ಭ ದಿಲೀಪ್ ಬಾಬ್ಲುಬೆಟ್ಟು 75 ಮತಗಳನ್ನು ಪಡೆದು ಭರ್ಜರಿಯಾಗಿ ಗೆಲುವು ಪಡೆದರೆ, ಅವರ ಪ್ರತಿಸ್ಪರ್ಧಿಗಳಾದ ಪುಷ್ಪರಾಜ ಗಾಂಭೀರ್ ಹಾಗೂ ಸುಬ್ರಹ್ಮಣ್ಯ ಭಟ್ ರವರು ತಲಾ 5 ಮತಗಳನ್ನು ಪಡೆದರು. 3 ಮತ ಅಸಿಂಧುವಾಗಿತ್ತು.
ಮುಖ್ಯ ಚುನಾವಣಾಧಿಕಾರಿಯಾಗಿ ಚಂದ್ರಶೇಖರ ನರಿಯೂರು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹರೀಶ್ ಬೂಡುಪನ್ನೆ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading