ಸುಳ್ಯದ ಬಾಳೆಮಕ್ಕಿ ಬಳಿ ಕಿಡಿಗೇಡಿಗಳು ಮಾಡಿದ ಕೃತ್ಯಕ್ಕೆ ನೆರಳಿಗಾಗಿ ನೆಟ್ಟಿದ್ದ 4 ಮರಗಳು ಬಲಿಯಾದ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಜೀಪು ಮತ್ತು ಟೆಂಪೊ ಚಾಲಕ ಮಾಲಕರ ಸಂಘದವರು ಇಂದು ಬೆಳಗ್ಗೆ ಕಲ್ಕುಡ ದೈವಸ್ಥಾನದಲ್ಲಿ ಕಿಡಿಗೇಡಿಗಳ ಪತ್ತೆಗಾಗಿ ಪ್ರಾರ್ಥಿಸಿಕೊಂಡರು.
ದ್ವಾರಕಾ ಹೋಟೆಲ್ ಬಳಿ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಬದಿಯಲ್ಲಿ ನೆರಳಿಗಾಗಿ ಗಿಡಗಳನ್ನು ನೆಡಲಾಗಿತ್ತು. ಇದರಲ್ಲಿ ನಾಲ್ಕು ಮರಗಳನ್ನು ಯಾರೋ ದುಷ್ಕರ್ಮಿಗಳು ಗರಗಸದಲ್ಲಿ ಮುಕ್ಕಾಲು ಭಾಗ ಕೊಯ್ದು, ಆ ಜಾಗಕ್ಕೆ ಬಟ್ಟೆ ಕಟ್ಟಿ ಯಾರಿಗೂ ಗೊತ್ತಾಗದಂತೆ ಮಾಡಿದ್ದರು.
ಈ ಪ್ರದೇಶದಲ್ಲಿ ಮರದ ನೆರಳಿನಡಿಯಲ್ಲಿ ಜೀಪು ಮತ್ತು ಟೆಂಪೊಗಳನ್ನು ಪಾರ್ಕಿಂಗ್ ಮಾಡುತ್ತಿದ್ದರು.
ಈ ಮರಗಳನ್ನು ಈ ರೀತಿ ಕೊಯ್ದು ಕಿಡಿಗೇಡಿತನ ಮಾಡಿದವರಾರೆಂದು ಗೊತ್ತು ಪಡಿಸುವಂತೆ ದೈವಸ್ಥಾನದ ನಡೆಯಲ್ಲಿ ಸಂಘದ ಪದಾಧಿಕಾರಿಗಳು ಪ್ರಾರ್ಥಿಸಿಕೊಂಡರು.
- Saturday
- November 23rd, 2024