
ಸಂಪಾಜೆ ಸಮೀಪದ ಕೊಯನಾಡುನಲ್ಲಿ ಬೈಕ್ ಅಪಘಾತ ದಿಂದ ಬೈಕ್ ಸವಾರ ಮತ್ತು ಹಿಂಬದಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.ಇಬ್ಬರು ಮೈಸೂರು ಮೂಲದವರಾಗಿದ್ದಾರೆ.
ದುರ್ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಇಂದು ಬೆಳಗ್ಗೆ ಅಪಘಾತ ನಡೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.
ರಾಯಲ್ ಎನ್ ಫೀಲ್ಡ್ ಬೈಕ್ ಮತ್ತು ಇಬ್ಬರ ಮೃತ ದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ರಾತ್ರಿ ವೇಗದಿಂದ ಬಂದ ಬೈಕ್ ರಸ್ತೆಯ ಡಿವೈಡರ್ ಗೆ ಗುದ್ದಿರಬಹುದು ಎಂದು ಶಂಕಿಸಲಾಗಿದೆ.