ಸುಳ್ಯದ ಬಾಳೆಮಕ್ಕಿ ಬಳಿ ಹಲವರಿಗೆ ನೆರಳು ನೀಡುತ್ತಿದ್ದ ಹಾಗೂ ಕೆಲವರಿಗೆ ಅಡ್ಡವಾಗಿದ್ದ ಮರಗಳು ಇಂದು ಕಿಡಿಗೇಡಿಗಳ ಕೃತ್ಯಕ್ಕೆ ಬಲಿಯಾಗಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಳೆಮಕ್ಕಿಯ ರಾಜಶ್ರೀ ಕಾಂಪ್ಲೆಕ್ಸ್ ಎದುರುಗಡೆ ರಸ್ತೆ ಜೀಪು ಪಾರ್ಕಿಂಗ್ ನಲ್ಲಿ ನೆರಳಿಗಾಗಿ ನೆಟ್ಟಿದ್ದ ಗಿಡ ಚೆನ್ನಾಗಿ ಬೆಳೆದು ನೆರಳು ನೀಡುವ ಹಂತ ತಲುಪಿತ್ತು. ಇದರಲ್ಲಿ ನಾಲ್ಕು ಮರಗಳನ್ನು ಯಾರೋ ದುಷ್ಕರ್ಮಿಗಳು ಹೆಕ್ಸೊ ಬ್ಲೇಡ್ ಅಥವಾ ಸಣ್ಣ ಗರಗಸದಲ್ಲಿ ಸುತ್ತು ಕೊಯ್ದಿರುವುದು ಕಂಡುಬರುತ್ತದೆ. ಮತ್ತು ಕೊಯ್ದ ಜಾಗಕ್ಕೆ ಹಳೆ ಬಟ್ಟೆ ಕಟ್ಟಿ ಯಾರಿಗೂ ಗೊತ್ತಾಗದಂತೆ ಮಾಡಿದ್ದರು. ಇಂದು ಸಂಜೆ ಸುಮಾರು 4 ಗಂಟೆಗೆ ಬಂದ ಮಳೆ ಗಸಳಿಗೆ ಒಂದು ಮರ ಅಲ್ಲಿಯೇ ನಿಲ್ಲಿಸಿದ್ದ ಜೀಪು ಮೇಲೆ ಬಿದ್ದಿದೆ. ಮರ ಚಿಕ್ಕದಿದ್ದು ನಿಧಾನವಾಗಿ ಬಿದ್ದಿದ್ದರಿಂದ ಜೀಪಿಗೆ ಯಾವುದೇ ಹಾನಿಯಾಗಿಲ್ಲ. ಈ ಸಂದರ್ಭದಲ್ಲಿ ಅಲ್ಲಿ ಜನ ಸಂಚಾರವಿಲ್ಲದಿದ್ದುದರಿಂದ ಯಾರಿಗೂ ತೊಂದರೆಯಾಗಿಲ್ಲ.
ಸ್ಥಳಕ್ಕೆ ಪೋಲೀಸರು ಬಂದು ತನಿಖೆ ನಡೆಸಿದ್ದಾರೆ. ಅರ್ದ ಕೊಯ್ದಿದ್ದ ಮರಗಳನ್ನು ಪೋಲೀಸರ ಸೂಚನೆಯಂತೆ ತೆರವುಗೊಳಿಸಿದರು. ಪೋಲೀಸರು ಆದಷ್ಟು ಶೀಘ್ರ ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕಿದೆ.