
ಸುಬ್ರಹ್ಮಣ್ಯ, ಆಗಸ್ಟ್ 4: ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ-ಕೈಕಂಬ ನಡುತೋಟ ಕುಟುಂಬದಲ್ಲಿ ರವಿವಾರ ವರ್ಷ ಪ್ರತಿಯಂತೆ ಈ ವರ್ಷವೂ ಆಟಿ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆಟಿ ಅಮಾವಾಸ್ಯೆಯ ರವಿವಾರದಂದು ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆಯ ಮರದ ಕೆತ್ತೆಯನ್ನು ತಂದು ಕಷಾಯ ಮಾಡಿ ತದನಂತರ ಪ್ರತಿವರ್ಷದಂತೆ ಮನೆಯ ಪಕ್ಕದ ಹಳ್ಳಕ್ಕೆ ಹೋಗಿ ಮಿಂದು ನವಧಾನ್ಯಗಳನ್ನು ಒಳಗೊಂಡ ಹೂವು, ತೆಂಗಿನಕಾಯಿ ಇಟ್ಟು ಆರತಿ ಮಾಡಿ ಬಾಳೆ ಎಲೆಯಲ್ಲಿ ದಾನ ಬಿಡಲಾಯಿತು. ನಂತರ ಮನೆಗೆ ಬಂದು ಸರ್ವರೋಗ ನಿವಾರಕ ಎಂಬ ನಂಬಿಕೆ ಇರುವ ಕಷಾಯವನ್ನು ಕುಡಿದು ಆಟಿಯ ತಿಂಡಿಯನ್ನು ಸೇವಿಸಲಾಯಿತು. ಮನೆಯವರೆಲ್ಲರೂ ಸೇರಿ ಆಟಿ ಆಚರಣೆಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ನೀಲಪ್ಪಗೌಡ ನಡು ತೋಟ ,ವಿಶ್ವನಾಥ ನಡುತೋಟ, ಗಿರಿಧರ ನಡುತೋಟ, ವಿಜಯಕುಮಾರ ನಡುತೋಟ ಅಭಿಷೇಕ ನಡುತೋಟ ಹಾಗೂ ಮನೆಯವರು ಸಂಭ್ರಮದಲ್ಲಿ ಪಾಲ್ಗೊಂಡರು.
