- Tuesday
- December 3rd, 2024
ಬೆಂಗಳೂರು ಮತ್ತಿಕೆರೆ ಲಲಿತಾ ಕಲಾ ಆಡಿಟೋರಿಯಂ ನಲ್ಲಿ ಜು.28ರಂದು ನಡೆದ ನಟ ಪುನಿತ್ ರಾಜ್ ಕುಮಾರ್ ನೆನಪಿನ ಕಾರ್ಯಕ್ರಮದಲ್ಲಿ ಗಾಯಕ ವಿಜಯಕುಮಾರ್ ಹಳೆಗೇಟುರವರಿಗೆ ಪ್ರಕೃತಿ ರತ್ನ ಗಾನ ಕೋಗಿಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚಿಗೆ ಪಾಂಬಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಗಾನ ಚತುರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ವಿಜಯ ಕುಮಾರ್ ರವರು ಸುಳ್ಯ ಟಿಎಪಿಸಿಎಂಎಸ್ ಉದ್ಯೋಗಿಯಾಗಿದ್ದಾರೆ.
ಆಗಸ್ಟ್ 03 ರಂದು ಬೆಂಗಳೂರಿನಿಂದ ಮೈಸೂರಿಗೆ ಭಾರತೀಯ ಜನತಾ ಪಾರ್ಟಿ ಕರ್ನಾಟಕದ ವತಿಯಿಂದ ನಡೆಯುವ ಮೈಸೂರ್ ಚಲೋ ಯಾತ್ರೆಯ ವ್ಯವಸ್ಥೆಯ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ 150ಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ಬೆಂಗಳೂರಿಗೆ ಹೊರಟಿದ್ದು ಒಂದು ವಾರ ಕಾಲ ಯಾತ್ರೆಯ ವ್ಯವಸ್ಥೆಯ ದೃಷ್ಟಿಯಿಂದ ಕೆಲಸ ಮಾಡಲಿದ್ದಾರೆ. ಸುಳ್ಯಕ್ಕೆ ಆಗಮಿಸಿದ ಯುವ ಮೋರ್ಚಾದ ತಂಡವನ್ನು ಕರ್ನಾಟಕ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಒಕ್ಕೂಟಗಳ ಪದಾಧಿಕಾರಿಗಳಿಗೆ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಪವರ್ಗ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಗಾರವನ್ನು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷರಾದ ಶ್ರೀ ಯೋಗೀಶ್ ದೇವರವರು ದೀಪ ಬೆಳಗಿಸುವ ಮುಖೇನ ಚಾಲನೆಯನ್ನು ನೀಡಿದರು.ಈ...
ಅಂತರಾಜ್ಯ ಹೆದ್ದಾರಿ ಕಡಿತದ ಭೀತಿ – ವಿದ್ಯಾರ್ಥಿಗಳಿಗೆ, ನೌಕರರಿಗೆ ಸಂಕಷ್ಟ – ದೇಲಂಪಾಡಿ ಗ್ರಾ.ಪಂ ಅಧ್ಯಕ್ಷೆ ಪರಿಶೀಲನೆ
ಸುಳ್ಯ ಕಾಸರಗೋಡು ಅಂತರಾಜ್ಯ ಸಂಪರ್ಕಿತ ರಸ್ತೆಯಲ್ಲಿ ನೀರು ಹರಿದು ಸಂಪೂರ್ಣ ಹಾನಿಯಾಗಿ ಇದೀಗ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಮುರೂರು ಎಂಬಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲೇ ನೀರು ಹರಿದು ಆ.01 ರಂದು ಮರ ಸಾಗಾಟದ ಲಾರಿ ಸಂಚರಿಸುವ ವೇಳೆ ಚಕ್ರಗಳು ರಸ್ತೆಯಲ್ಲಿ ಹೂತು ಹೋಗಿ...