
ಜಾಲ್ಸೂರು- ಕಾಸರಗೋಡು ಅಂತರರಾಜ್ಯ ಹೆದ್ದಾರಿಯ ಮುರೂರಿನಲ್ಲಿ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಹೊಂಡವನ್ನು ಕೇರಳ ಲೋಕೋಪಯೋಗಿ ಇಲಾಖೆಯ ವತಿಯಿಂದ ಜಲ್ಲಿ ಹಾಕಿ ತಾತ್ಕಾಲಿಕ ದುರಸ್ಥಿಪಡಿಸಲಾಯಿತು.ಕೇರಳ ಲೋಕೋಪಯೋಗಿ ಇಲಾಖೆಯ ವತಿಯಿಂದ ಟಿಪ್ಪರ್ ಮೂಲಕ ಒಂದು ಲೋಡ್ ಜಲ್ಲಿ ತಂದು ರಸ್ತೆಗೆ ಹಾಕಿ ಲೆವೆಲ್ ಮಾಡಿರುವುದಲ್ಲದೆ ರಸ್ತೆಯ ಇಕ್ಕೆಲಗಳ ನೀರು ಸರಾಗವಾಗಿ ಹರಿದುಹೋಗಲು ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿರುವುದಾಗಿ ತಿಳಿದುಬಂದಿದೆ.

