ಶುಭಶ್ರೀ ಮಹಿಳಾ ಮಂಡಳಿ (ರಿ) ಗಾಂಧಿನಗರ, ಅಂಗನವಾಡಿ ಕೇಂದ್ರ ಗಾಂಧಿನಗರ, ಬಾಲವಿಕಾಸ ಸಮಿತಿ ಗಾಂಧಿನಗರ ಇದರ ಸಂಯುಕ್ತ ಆಶ್ರಯ ದಲ್ಲಿ “ಆಟಿದ ಗೌಜಿ” ಕಾರ್ಯಕ್ರಮ ವು ಗಾಂಧಿನಗರ ಅಂಗನವಾಡಿ ಕೇಂದ್ರ ದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶುಭಶ್ರೀ ಮಹಿಳಾ ಮಂಡಳಿ ಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದರವರು ವಹಿಸಿದ್ದರು. ಮಂಡಳಿ ಯ ಕೋಶಾಧಿಕಾರಿ ಶ್ರೀಮತಿ ಗಿರಿಜಾ. ಎಂ.ವಿಯವರು ಆಟಿಯ ವಿಶೇಷ ತೆ ಬಗ್ಗೆ ಮಾಹಿತಿ ನೀಡಿದರು.ಶುಭಶ್ರೀ ಮಹಿಳಾ ಮಂಡಳಿಯ ಸದಸ್ಯೆಯರು ತಯಾರಿಸಿದ ವಿಶೇಷ ಆಟಿಯ ಖಾದ್ಯ ಗಳನ್ನು ಎಲ್ಲರೂ ಸವಿದರು. ವೇದಿಕೆಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳರವರು ಉಪಸ್ಥಿತರಿದ್ದರು. ಕೊನೆಯಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ
ಶ್ರೀಮತಿ ಸವಿತಾ ವಂದಿಸಿದರು.
- Tuesday
- December 3rd, 2024