- Wednesday
- December 4th, 2024
ದ.ಕ ಜಿಲ್ಲೆಯ ಪ್ರವರ್ಗ "ಬಿ" ಮತ್ತು "ಸಿ" ಗೆ ಸೇರಿದ ದೇವಸ್ಥಾನ/ದೈವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಸಹಾಯಕ ಆಯುಕ್ತರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಕಂದ್ರಪ್ಪಾಡಿ...
ಅಜ್ಜಾವರ ಗ್ರಾಮದ ಜೇಡಿಗುಂಡಿ ಇರುವಂಬಳ್ಳ ರಸ್ತೆಯಲ್ಲಿ ಶಾಲಾ ಸಮೀಪ ಮೂರು ಮರಗಳು ಬೀಳುವ ಸ್ಥಿತಿಯಲ್ಲಿದ್ದು ಕೂಡಲೇ ತೆರವುಗೊಳಿಸಲು ನಾಗರಿಕರು ಒತ್ತಾಯಿಸಿದ್ದಾರೆ. ಈ ರಸ್ತೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಸಂಚಾರಿಸುತ್ತಿದ್ದು, 11 ಕೆವಿ. ಹೆಚ್.ಟಿ. ಲೈನ್ ಕೂಡ ಹಾದುಹೋಗುತ್ತಿದ್ದು ಅಪಾಯಕಾರಿ ಸ್ಥಿತಿಯಲ್ಲಿರುವ ಮರವನ್ನು ಅನಾಹುತ ಸಂಭವಿಸುವ ಮೊದಲು ತೆರವುಗೊಳಿಸುವುದು ಒಳಿತು.
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶೀತಲ್ ಯು.ಕೆ. ಪ್ರಭಾರ ವಹಿಸಿಕೊಂಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ರಮೇಶ್ ಬಿ.ಈ. ಜು.31ರಂದು ನಿವೃತ್ತರಾದ ಬಳಿಕ ತೆರವಾದ ಸ್ಥಾನಕ್ಕೆ ಸುಳ್ಯ ಕ್ಷೇತ್ರ ಸಮನ್ವಯಾಧಿಕಾರಿಯಾಗಿರುವ ಶೀತಲ್ ರವರು ಪ್ರಭಾರ ವಹಿಸಿಕೊಳ್ಳುವಂತೆ ಡಿಡಿಪಿಐ ಯವರು ಆದೇಶದಂತೆ ಅಧಿಕಾರ ಸ್ವೀಕರಿಸಲಿದ್ದಾರೆ.
ಅಯ್ಯನಕಟ್ಟೆ ನಮ್ಮ ಆರೋಗ್ಯಧಾಮದಲ್ಲಿ ಆಗಸ್ಟ್ 04 ಭಾನುವಾರದಂದು ಮಧ್ಯಾಹ್ನ 2:30 - 4:30 ತನಕ ಅಸ್ತಮಾ ಮತ್ತು ಇನ್ನಿತರ ಉಸಿರಾಟ ಸಂಬಂಧಿ ಖಾಯಿಲೆಗಳ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.ತಜ್ಞ ವೈದ್ಯರಾದ ಡಾl ನರಸಿಂಹ ಶಾಸ್ತ್ರೀ ಮಂಗಳೂರು ಇವರು ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರವನ್ನು ನೀಡಲಿದ್ದಾರೆ.ಇದೇ ಸಂದರ್ಭದಲ್ಲಿ ಉಚಿತವಾಗಿ ಶ್ವಾಸಕೋಶದ ಪರೀಕ್ಷೆ (Spirometry ) ಮತ್ತು Nebulization Machine...